ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ: ಅಗ್ನಿಬನ್ನಿರಾಯ ಮೆರವಣಿಗೆ

Published 28 ಮಾರ್ಚ್ 2024, 13:45 IST
Last Updated 28 ಮಾರ್ಚ್ 2024, 13:45 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಕಲ್ಲೂರು ಹಾಗೂ ಬೆನಕನಗೊಂದಿ ಗ್ರಾಮದ ಅಗ್ನಿವಂಶ ಕ್ಷತ್ರಿಯ ತಿಗಳ ಸಮುದಾಯದಿಂದ ಅಗ್ನಿ ಬನ್ನಿರಾಯ ಜಯಂತಿಯನ್ನು ಗುರುವಾರ ಅದ್ದೂರಿಯಾಗಿ ಆಚರಿಸಲಾಯಿತು.

ಗ್ರಾಮದ ರಾಜ ಬೀದಿಗಳಲ್ಲಿ ಅಗ್ನಿಬನ್ನಿರಾಯ ಮೆರವಣಿಗೆ ನಡೆಯಿತು. ಮೆರವಣಿಗೆ ಸಾಗಿದ ದಾರಿ ಉದ್ಧಕ್ಕೂ ಪಾನಕ, ಫಲಹಾರ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ಅನ್ನಸಂತರ್ಪಣೆ ನಡೆಯಿತು.

ಆಣೆಕಾರ್ ಯಜಮಾನ್ ಕೃಷ್ಣಪ್ಪ ಮಾತನಾಡಿ, ತಿಗಳ ಸಮುದಾಯದವರು ಯಾರಿಗೂ ಕೆಡಕು ಬಯಸದೆ ಸನ್ಮಾರ್ಗದಲ್ಲಿ ಸಾಗುತ್ತಾ, ಶ್ರಮ ಜೀವನದ ಬದುಕು ಕಟ್ಟಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕುಲದ ಗೌಡರಾದ ಕೆ.ಪಿ. ರಾಜೇಗೌಡರು ಮಾತನಾಡಿ, ಸಮುದಾಯದವರು ಹಣ್ಣು, ತರಕಾರಿ ಬೆಳೆದು ಬದುಕು ಕಟ್ಟಿಕೊಳ್ಳುವ ಜೊತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಮುದ್ರೆ ಲಕ್ಷ್ಮಣಪ್ಪ, ಬೆನಕನಗೊಂದಿ ಗೌಡರು, ಸಮುದಾಯದ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT