ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ವಿರೋಧಿ: ಕ್ರಮದ ಎಚ್ಚರಿಕೆ ನೀಡಿದ ಶಾಸಕ ಬಿ.ಸುರೇಶ್‌ಗೌಡ

Published 15 ಮಾರ್ಚ್ 2024, 2:56 IST
Last Updated 15 ಮಾರ್ಚ್ 2024, 2:56 IST
ಅಕ್ಷರ ಗಾತ್ರ

ತುಮಕೂರು: ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ವಿ.ಸೋಮಣ್ಣ ಹೆಸರು ಪ್ರಕಟವಾಗಿದ್ದು, ವರಿಷ್ಠರ ನಿರ್ಧಾರದ ವಿರುದ್ಧ ಹೇಳಿಕೆ ನೀಡುವುದು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡ ಎಚ್ಚರಿಕೆ ನೀಡಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಪಕ್ಷದ ಅಭ್ಯರ್ಥಿಯ ಘೋಷಣೆಯಾದ ನಂತರ ಸ್ವಾಗತಿಸಬೇಕು. ಅದನ್ನು ಹೊರತುಪಡಿಸಿ ವಿರೋಧಿಸುವುದು, ಹಾದಿ ಬೀದಿಯಲ್ಲಿ ಪಕ್ಷ, ವರಿಷ್ಠರು, ಅಭ್ಯರ್ಥಿ ಬಗ್ಗೆ ಟೀಕಿಸುವುದು, ಮುಜುಗರ ಉಂಟು ಮಾಡಬಾರದು. ಒಂದು ವೇಳೆ ಇಂತಹ ಚಟುವಟಿಕೆ ಕಂಡುಬಂದರೆ ಅಂತಹವರು ಎಷ್ಟೇ ದೊಡ್ಡವರಾಗಿದ್ದರೂ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮಮಟ್ಟದಲ್ಲಿ ಅತ್ಯಂತ ಉತ್ಸಾಹದಿಂದ ಯುವಪಡೆ ಕೆಲಸ ಮಾಡುತ್ತಿದೆ. ನಮಗೆ ಯಾರಿಗೂ ಗೊತ್ತಿಲ್ಲದೆ ಯುವಕರು ಗ್ರಾಮಗಳಲ್ಲಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಚುನಾವಣೆ ಸಮಯದಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಪಕ್ಷದ ಮುಖಂಡರಿಗೆ ಸಲಹೆ ಮಾಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಮುಖಂಡ ಹನುಮಂತರಾಜು, ಜಿಲ್ಲಾ ಸಂಚಾಲಕ ಬೈರಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗರಾಜು, ಪ್ರಮುಖರಾದ ರುದ್ರೇಶ, ಶ್ರೀನಿವಾಸ ಬೆಳಗುಂಬ, ಪ್ರಭಾಕರ, ಜಿಲ್ಲೆಯ ಎಲ್ಲಾ ಮಂಡಲದ ಬಿಜೆಪಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT