ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಿಗೇನಹಳ್ಳಿ: ಅಕ್ಷರ ದಾಸೋಹದ ಸಿಲಿಂಡರ್‌, ದಿನಸಿ ಕಳ್ಳತನದ ಆರೋಪಿಗಳ ಬಂಧನ

Published 19 ಜನವರಿ 2024, 13:44 IST
Last Updated 19 ಜನವರಿ 2024, 13:44 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಅಕ್ಷರ ದಾಸೋಹದ ಸಾಮಗ್ರಿ ಹಾಗೂ ಸಿಲಿಂಡರ್ ಕಳುವು ಮಾಡಿದ್ದ ಆರೋಪಿಗಳನ್ನು ಕೊಡಿಗೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಪುರವರ ಹೋಬಳಿ ಕೋಡಗದಾಲ ಗ್ರಾಮದ ಕಾಳಿದಾಸ ಪ್ರೌಢಶಾಲೆ ಅಕ್ಷರ ದಾಸೋಹದ ಕೊಠಡಿಯ ಎರಡು ಬಾಗಿಲುಗಳ ಬೀಗ ಒಡೆದಿದ್ದ ಕಳ್ಳರು 236 ಕೆ.ಜಿ ಬೇಳೆ, 200 ಕೆಜಿ ಅಕ್ಕಿ, 65 ಕೆ.ಜಿ ಗೋಧಿ, ಎರಡು ಸಿಲಿಂಡರ್ ಸೇರಿದಂತೆ ₹16 ಸಾವಿರ ಮೌಲ್ಯದ ವಸ್ತುಗಳನ್ನು ಕಳುವು ಮಾಡಿದ್ದರು. ಈ ಬಗ್ಗೆ ನವೆಂಬರ್ 23ರಂದು ಪ್ರಕರಣ ದಾಖಲಾಗಿತ್ತು.

ಕೊಡಿಗೇನಹಳ್ಳಿ ಠಾಣೆಯ ಪಿಎಸ್‌ಐ ಶ್ರೀನಿವಾಸ್ ಪ್ರಸಾದ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಆರೋಪಿ ಮಧುಗಿರಿ ದೊಡ್ಡಪೇಟೆ ನವೀನ್, ಕರಡಿಪುರದ ಆಫ್ತಾಬ್ ಅವರನ್ನು ಬಂಧಿಸಿ ಕಳವು ಮಾಡಲು ಬಳಸಿದ್ದ ಲಗೇಜ್ ಆಟೊ ಹಾಗೂ ನಾಲ್ಕು ಸಿಲಿಂಡರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಸಿಬ್ಬಂದಿ ಎಂ.ಮಂಜುನಾಥ್, ರಮೇಶ್, ನರಸಿಂಹಮೂರ್ತಿ, ಜಯರಾಮಯ್ಯ, ಶ್ರೀನಿವಾಸ್, ಪಾಂಡುರಂಗರಾವ್, ಬೋಗನರಸಿಂಹಯ್ಯ, ಬಾಲಾಜಿನಾಯ್ಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT