ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜುಕೊಳದಲ್ಲಿ ಮುಳುಗಿ ಬಾಲಕ ಸಾವು

Published 8 ಏಪ್ರಿಲ್ 2024, 4:35 IST
Last Updated 8 ಏಪ್ರಿಲ್ 2024, 4:35 IST
ಅಕ್ಷರ ಗಾತ್ರ

ತುಮಕೂರು: ನಗರ ಹೊರ ವಲಯದ ಅರಕೆರೆ ಬಳಿಯ ಎಂಎಆರ್‌ ಈಜುಕೊಳದಲ್ಲಿ ಮುಳುಗಿ ಅಜಯ್‌ಕುಮಾರ್‌ ಪಾಸ್ವಾನ್‌ (14) ಎಂಬ ಬಾಲಕ ಭಾನುವಾರ ಮೃತಪಟ್ಟಿದ್ದಾರೆ.

ಅಜಯ್‌ಕುಮಾರ್‌ ಬಿಹಾರದವರು. ಅಂತರಸನಹಳ್ಳಿಯ ಕೈಗಾರಿಕೆಯೊಂದರಲ್ಲಿ ಅವರ ಅಕ್ಕ–ಭಾವ ಕೆಲಸ ಮಾಡುತ್ತಿದ್ದರು. ಅವರ ಜತೆಗೆ ಬಾಲಕ ವಾಸವಿದ್ದರು. ಶಿರಾಗೇಟ್‌ ಹತ್ತಿರದ ಉತ್ತರ ಬಡಾವಣೆ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದರು. ಸ್ನೇಹಿತರ ಜತೆಗೆ ಈಜಾಡಲು ತೆರಳಿದಾಗ ಘಟನೆ ನಡೆದಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT