ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಫೆ. 9ರಂದು ವಾಲ್ಮೀಕಿ ರಥ ಲೋಕಾರ್ಪಣೆ

Last Updated 18 ಜನವರಿ 2023, 5:54 IST
ಅಕ್ಷರ ಗಾತ್ರ

ಪಾವಗಡ: ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯಲ್ಲಿ ಫೆ. 9ರಂದು ₹ 1.31 ಕೋಟಿ ಮೌಲ್ಯದ ವಾಲ್ಮೀಕಿ ರಥವನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಫೆ. 8, 9ರಂದು ವಾಲ್ಮೀಕಿ ಜಾತ್ರೆ ನಡೆಯಲಿದೆ. ಸಮುದಾಯದ ಜಾಗೃತಿಗಾಗಿ ಪ್ರತಿವರ್ಷ ಜಾತ್ರೆ ನಡೆಸಲಾಗುತ್ತಿದೆ. ಸಮುದಾಯದ ಸಮಸ್ಯೆಗಳು, ಬೇಡಿಕೆಗಳನ್ನು ಜಾತ್ರೆಯಲ್ಲಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ನಿಡಗಲ್ ವಾಲ್ಮೀಕಿ ಆಶ್ರಮದ ವಾಲ್ಮೀಕಿ ಸಂಜಯ ಕುಮಾರ ಸ್ವಾಮೀಜಿ ಮಾತನಾಡಿ, ಪ್ರಸನ್ನಾನಂದಪುರಿ ಸ್ವಾಮೀಜಿ ಅವರ ಹೋರಾಟದಿಂದ ಪರಿಶಿಷ್ಟ ಜಾತಿ ಮತ್ತು ಪಂಗಡ ಮೀಸಲಾತಿ ಪ್ರಮಾಣ ಹೆಚ್ಚಳವಾಗಿದೆ. ಸ್ವಾಮೀಜಿ ರಾಜ್ಯದಾದ್ಯಂತ ಸಂಚರಿಸಿ ಜಾಗೃತಿ, ಸಂಘಟನೆಯ ಕೆಲಸ ಮಾಡುತ್ತಿದ್ದಾರೆ ಎಂದು
ತಿಳಿಸಿದರು.

ಕಸಬಾ ವಿಎಸ್‌ಎಸ್‌ಎನ್ ಸಿಇಒ ನಾರಾಯಣಮೂರ್ತಿ, ನಾಯಕ ನೌಕರರ ಸಂಘದ ಅಧ್ಯಕ್ಷ ಎನ್. ಅನಿಲ್ ಕುಮಾರ್, ಎಇಇ ಹನುಮಂತಪ್ಪ, ಮುಖಂಡ ಅಂಜನ್ ನಾಯಕ, ಗುಟ್ಟಳ್ಳಿ ಮಣಿ, ಕಾವಲಗೆರೆ ರಾಮಾಂಜಿನಪ್ಪ, ಕರವೇ ಲಕ್ಷ್ಮೀನಾರಾಯಣ, ಶಿವಪ್ಪ ನಾಯಕ, ಪಾಳೇಗಾರ ಲೋಕೇಶ್, ಚಂದ್ರಶೇಖರ್ ರಾಜ್, ಹೊ.ಮಾ. ನಾಗರಾಜು, ಓಂಕಾರ ನಾಯಕ, ಭಾಸ್ಕರ್ ನಾಯಕ, ಬಲರಾಮ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT