ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಮೂವರಿಗೆ ‘ವೀಚಿ’ ಸಾಹಿತ್ಯ ಪ್ರಶಸ್ತಿ

Published 21 ಮೇ 2024, 14:08 IST
Last Updated 21 ಮೇ 2024, 14:08 IST
ಅಕ್ಷರ ಗಾತ್ರ

ತುಮಕೂರು: ವೀಚಿ ಸಾಹಿತ್ಯ ಪ್ರತಿಷ್ಠಾನ ಕೊಡಮಾಡುವ 2023ನೇ ಸಾಲಿನ ‘ವೀಚಿ ಸಾಹಿತ್ಯ ಪ್ರಶಸ್ತಿ’ಗೆ ಬಿ.ಜನಾರ್ದನ ಭಟ್ ಅವರ 'ವಿನೂತನ ಕಥನ ಕಾರಣ' (ವಿಮರ್ಶೆ) ಹಾಗೂ ರವಿಕುಮಾರ್ ನೀಹ ಅವರ 'ಅರಸು ಕುರನ್ಗರಾಯ' (ಸಂಶೋಧನೆ) ಕೃತಿಗಳು ಆಯ್ಕೆಯಾಗಿವೆ.

ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಪ್ರಶಸ್ತಿಗೆ ಎರಡು ಕೃತಿ ಆಯ್ಕೆಯಾಗಿದ್ದು, ಪ್ರಶಸ್ತಿ ಮೊತ್ತವನ್ನು ಇಬ್ಬರು ಲೇಖಕರಿಗೂ ಸಮನಾಗಿ ನೀಡಲಾಗುತ್ತದೆ.

ವೀಚಿ ಯುವ ಪ್ರಶಸ್ತಿಗೆ ದಯಾನಂದ ಅವರ 'ಬುದ್ಧನ ಕಿವಿ' (ಕತೆಗಳು) ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು ₹5 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ಸಾಹಿತಿಗಳಾದ ಎಚ್.ದಂಡಪ್ಪ, ಎಸ್.ಗಂಗಾಧರಯ್ಯ, ಗೀತಾ ವಸಂತ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ಪ್ರಶಸ್ತಿಗೆ ಕೃತಿಗಳನ್ನು ಆಯ್ಕೆ ಮಾಡಿದೆ ಎಂದು ವೀಚಿ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಎಂ.ಎಚ್.ನಾಗರಾಜ್ ತಿಳಿಸಿದ್ದಾರೆ.

ರವಿಕುಮಾರ್ ನೀಹ
ರವಿಕುಮಾರ್ ನೀಹ
ದಯಾನಂದ
ದಯಾನಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT