ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವೇಗೌಡರು ಜಾತಿವಾದಿ ಅಲ್ಲ, ಕುಟುಂಬವಾದಿ: ಕೆ.ಎನ್‌.ರಾಜಣ್ಣ ಟೀಕೆ

Published 22 ಏಪ್ರಿಲ್ 2024, 7:59 IST
Last Updated 22 ಏಪ್ರಿಲ್ 2024, 7:59 IST
ಅಕ್ಷರ ಗಾತ್ರ

ತುಮಕೂರು: ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಕುಟುಂಬಕ್ಕೆ 1966ರಲ್ಲಿ ಕೇವಲ 12 ಎಕರೆ ಭೂಮಿ ಇತ್ತು. ಇವತ್ತು ಎಷ್ಟು ಎಕರೆ ಇದೆ? ದೇವೇಗೌಡರ ಅಕ್ಷಯಪಾತ್ರೆ ತುಂಬಿಲ್ಲವೇ. ಅದು ಇನ್ನೂ ತುಂಬಬೇಕಾ ಎಂದು ಸಹಕಾರ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ.

ನಗರದಲ್ಲಿ ಭಾನುವಾರ ಜಾತ್ಯತೀತ ಯುವ ವೇದಿಕೆ ಆಯೋಜಿಸಿದ್ದ ಅತಿ ಹಿಂದುಳಿದ ಜಾತಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ಕೊಟ್ಟ ಖಾಲಿ ಚೊಂಬನ್ನು ಮೋದಿಯವರು ಅಕ್ಷಯಪಾತ್ರೆ ಮಾಡಿದ್ದಾರೆ’ ಎಂಬ ಎಚ್‌.ಡಿ.ದೇವೇಗೌಡ ಹೇಳಿಕೆಗೆ ತಿರುಗೇಟು ನೀಡಿದರು.

ದೇವೇಗೌಡರು ಜಾತಿವಾದಿ ಅಲ್ಲ, ಕುಟುಂಬವಾದಿ. ಜೆಡಿಎಸ್‌ ಪಕ್ಷವು ಗೌಡರ ಅಳಿಯ, ಮಗ, ಮೊಮ್ಮಗ... ಹೀಗೆ ಒಂದು ಕುಟುಂಬಕ್ಕೆ ಸೀಮಿತವಾಗಿದೆ. ಕುಟುಂಬದ ಸದಸ್ಯರನ್ನು ಬಿಟ್ಟರೆ ಯಾವ ಒಕ್ಕಲಿಗರನ್ನೂ ದೇವೇಗೌಡರು ಬೆಳೆಸಲಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ ಅವರೇ ಚುನಾವಣೆಗೆ ನಿಂತರು. ಮುದ್ದಹನುಮೇಗೌಡ ಒಕ್ಕಲಿಗರಲ್ಲವೇ? ಎಂದು ಪ್ರಶ್ನಿಸಿದರು.

‘ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದು ದೇವೇಗೌಡರು ಈ ಹಿಂದೆ ಹೇಳಿದ್ದರು. ಈಗ ಮೋದಿಯೇ ದೇಶ ಉಳಿಸಿದ್ದಾರೆ ಎನ್ನುತ್ತಿದ್ದಾರೆ. ಅವರು ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ’ ಎಂದರು.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ದೇವೇಗೌಡರ ಕುಟುಂಬ ರಾಜಕಾರಣ ಅಂತ್ಯವಾಗುತ್ತದೆ. ಅಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ತುಮಕೂರಿನಲ್ಲಿ ಅಂತ್ಯ ಹಾಡಿ ಕಳಿಸಿದ್ದೇವೆ. ಹಾಸನದಲ್ಲಿಯೂ ಅಂತ್ಯ ಮಾಡುತ್ತೇವೆ.
–ಕೆ.ಎನ್‌. ರಾಜಣ್ಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT