ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ಗುಂಪುಗಳ ನಡುವೆ ಘರ್ಷಣೆ: 9 ಬಂಧನ

Published 25 ಫೆಬ್ರುವರಿ 2024, 4:19 IST
Last Updated 25 ಫೆಬ್ರುವರಿ 2024, 4:19 IST
ಅಕ್ಷರ ಗಾತ್ರ

ಕುಣಿಗಲ್: ಕ್ಷುಲಕ ಕಾರಣಕ್ಕಾಗಿ ಶುಕ್ರವಾರ ರಾತ್ರಿ ಪಟ್ಟಣದ ಮದ್ದೂರು ರಸ್ತೆಯಲ್ಲಿ ಎರಡು ಗುಂಪುಗಳ  ನಡುವೆ ಘರ್ಷಣೆ ನಡೆದಿದೆ. ಪ್ರಕರಣ ಸಂಬಂಧ 9 ಮಂದಿಯನ್ನು ಬಂಧಿಸಲಾಗಿದೆ.

ಮದ್ದೂರು ರಸ್ತೆ ಈದ್ಗಾ ಮೈದಾನ ಮಳಿಗೆ ವಿಚಾರವಾಗಿ ವಿವಾದ ಇತ್ತು. ಮಳಿಗೆಯೊಂದರ ಬಳಿ ಹಿದಾಯಿತ್ ವುಲ್ಲಾ ಗುಂಪು ಮಣ್ಣು ಸುರಿದು ಸಮತಟ್ಟು ಮಾಡುವ ಸಮಯದಲ್ಲಿ ಬಂದ ಶೂರಾ ಸಮಿತಿ ಅಧ್ಯಕ್ಷ ಅನ್ಸರ್ ಪಾಷಾ ಗುಂಪು ತಡೆದು ಆಕ್ಷೇಪ ವ್ಯಕ್ತಪಡಿಸಿತು. ಆಗ ಎರಡು ಗುಂಪುಗಳ ನಡುವೆ ಪರಸ್ಪರ ಘರ್ಷಣೆ ನಡೆದಿದೆ.

ಪೊಲೀಸರು ಲಘುಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಘರ್ಷಣೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ. ಎರಡೂ ಕಡೆ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT