ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಶವ ಹೊರ ತೆಗೆದು ಮತ್ತೊಮ್ಮೆ ಅಂತ್ಯಕ್ರಿಯೆ

Published 5 ಜನವರಿ 2024, 15:37 IST
Last Updated 5 ಜನವರಿ 2024, 15:37 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ದುರ್ಗದಹಳ್ಳಿಯ ಮುಖ್ಯರಸ್ತೆ ಬದಿ ಡಿ.17ರಂದು ಅಂತ್ಯ ಸಂಸ್ಕಾರ ನೆರವೇರಿಸಿದ್ದ ಶವವನ್ನು ಅಧಿಕಾರಿಗಳ ಸಮ್ಮುಖದಲ್ಲಿ ಶುಕ್ರವಾರ ಹೊರತೆಗೆದು ಬೇರೆಡೆ ಶವ ಸಂಸ್ಕಾರ ಮಾಡಲಾಗಿದೆ.

ದುರ್ಗದಹಳ್ಳಿಯ ಪೆದ್ದಯ್ಯ (65) ಮೃತಪಟ್ಟಿದ್ದರು. ಸ್ಮಶಾನಕ್ಕೆ ಮೃತದೇಹ ತೆಗೆದುಕೊಂಡು ಹೋಗಲು ಸೂಕ್ತ ದಾರಿ ಇಲ್ಲದೆ ಕುಟುಂಬದ ಸದಸ್ಯರು ಮುಖ್ಯ ರಸ್ತೆಯ ಪಕ್ಕದಲ್ಲೇ ಶವ ಸಂಸ್ಕಾರ ಮಾಡಿದ್ದರು. ಈ ಘಟನೆಯ ನಂತರ ಗ್ರಾಮದ ಸಾರ್ವಜನಿಕರು ರಸ್ತೆ ಬದಿ ಅಂತ್ಯ ಸಂಸ್ಕಾರ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿ, ಶವವನ್ನು ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

‘ದಾರಿಯಲ್ಲಿ ಓಡಾಡಲು ಸಾರ್ವಜನಿಕರು ಭಯ ಭೀತರಾಗಿದ್ದು, ಬೇರೆಡೆ ಶವ ಸಂಸ್ಕಾರ ಮಾಡುವಂತೆ’ ಮೃತ ಪೆದ್ದಯ್ಯ ಪುತ್ರ ತಿಮ್ಮರಾಜು ಅವರಿಗೆ ಅಧಿಕಾರಿಗಳು ಸೂಚಿಸಿದ್ದರು. ‘ಒಮ್ಮೆ ಅಂತಿಮ ಸಂಸ್ಕಾರ ಮಾಡಿದ ನಂತರ ಮತ್ತೆ ಹೊರ ತೆಗೆಯಲು ಆಗುವುದಿಲ್ಲ’ ಎಂದು ಅವರು ಸುಮ್ಮನಾಗಿದ್ದರು.

ಸ್ಥಳೀಯರ ಒತ್ತಾಯದ ಮೇರೆಗೆ ತಹಶೀಲ್ದಾರ್‌ ಸಿದ್ದೇಶ್‌, ಇತರೆ ಅಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ, ಪೆದ್ದಯ್ಯ ಶವ ಹೊರ ತೆಗೆಸಿದರು. ನಂತರ ದುರ್ಗದಹಳ್ಳಿಯಿಂದ 1 ಕಿ.ಮೀ ದೂರದಲ್ಲಿ, ದೇವರಾಯನದುರ್ಗದ ಬೆಟ್ಟದ ತಪ್ಪಲಿನಲ್ಲಿ ಗುರುತಿಸಿರುವ ಸ್ಮಶಾನದಲ್ಲಿ ಮತ್ತೊಮ್ಮೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT