ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲುರು ಮೂಕಾಂಬಿಕೆ ದರ್ಶನ ಪಡೆದ ಡಿ.ಕೆ.ಶಿವಕುಮಾರ್

Published 26 ಮಾರ್ಚ್ 2024, 15:53 IST
Last Updated 26 ಮಾರ್ಚ್ 2024, 15:53 IST
ಅಕ್ಷರ ಗಾತ್ರ

ಕುಂದಾಪುರ: ಕೊಲ್ಲೂರಿನ ಮೂಕಾಂಬಿಕಾ‌ ದೇವಸ್ಥಾನಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

 ಡಿಕೆಶಿ ಅವರನ್ನು ಪೂರ್ಣ ಕುಂಭದೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ ಅವರು ಕಂಬದ ಗಣಪತಿ, ಸ್ವಯಂಭು, ಮೂಕಾಂಬಿಕೆ ದೇವಿ, ವೀರಭದ್ರ ಸ್ವಾಮಿಯ ದರ್ಶನ ಪಡೆದರು. ಋತ್ವಿಜರಾದ ಎನ್. ನರಸಿಂಹ‌ ಅಡಿಗ ಹಾಗೂ ಶ್ರೀಧರ ಅಡಿಗರು ಅವರನ್ನು ಗೌರವಿಸಿದರು.

ಮಾಜಿ‌ ಶಾಸಕ ಕೆ.ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ ಶೆಟ್ಟಿ, ಉದ್ಯಮಿ ಯು.ಬಿ. ಶೆಟ್ಟಿ, ಆಪ್ತ ಕಾರ್ಯದರ್ಶಿ ಶ್ರೀಧರ್, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಮುಖರಾದ ಮಿಥುನ್ ರೈ, ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್ ರಾಜ್ ಕಾಂಚನ್‌ ಉಡುಪಿ, ಇನಾಯತ್ ಆಲಿ ಸುರತ್ಕಲ್, ಕಿಶನ್‌ ಹೆಗ್ಡೆ‌ ಕೊಳ್ಕೆಬೈಲ್, ದಿನೇಶ್‌ ಪುತ್ರನ್, ಮುರುಳೀಧರ ಶೆಟ್ಟಿ ಇಂದ್ರಾಳಿ, ರಾಜು ಎಸ್. ಪೂಜಾರಿ, ಶಂಕರ ಪೂಜಾರಿ ಯಡ್ತರೆ, ಬಾಬು ಶೆಟ್ಟಿ ತಗ್ಗರ್ಸೆ, ರಮೇಶ್ ಗಾಣಿಗ ಕೊಲ್ಲೂರು, ಅರವಿಂದ‌ ಪೂಜಾರಿ ಪಡುಕೋಣೆ, ಹರೀಶ್ ತೋಳಾರ್ ಕೊಲ್ಲೂರು, ನಾಗರಾಜ್ ಗಾಣಿಗ, ಕುಂದಾಪುರ ಬ್ಲಾಕ್‌ ಎನ್ಎಸ್‌ಯುಐ ಅಧ್ಯಕ್ಷ ಸುಜನ್‌ ಶೆಟ್ಟಿ, ವಿಜಯ್ ಶೆಟ್ಟಿ ಕಾಲ್ತೋಡು, ಉದಯಕುಮಾರ ಶೆಟ್ಟಿ ಅಡಿಕೆಕೊಡ್ಲು ವಂಡ್ಸೆ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಹರ್ಷಾ ಬೆಂಗಳೂರು, ಡಾ.ಗುಹಾ ದ್ವಾರಕಾನಾಥ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT