ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಕಳ, ಹೆಬ್ರಿ: ಉದುರುತ್ತಿರುವ ಎಳತು ಅಡಿಕೆ– ಕಂಗಲಾದ ರೈತರು

ಸುಕುಮಾರ್‌ ಮುನಿಯಾಲ್
Published 15 ಮೇ 2024, 7:55 IST
Last Updated 15 ಮೇ 2024, 7:55 IST
ಅಕ್ಷರ ಗಾತ್ರ

ಹೆಬ್ರಿ: ಕಾರ್ಕಳ, ಹೆಬ್ರಿ ತಾಲ್ಲೂಕಿನಾದ್ಯಂತ ಸುಡು ಬಿಸಿಲಿಗೆ ಎಳತು ಅಡಿಕೆಗಳು ಉದುರುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

ಹೆಬ್ರಿ, ಕಾರ್ಕಳ ತಾಲ್ಲೂಕು 1,07,586 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣ ಹೊಂದಿದೆ. ಅದರಲ್ಲಿ 32,800 ಹೆಕ್ಟೇರ್ ಅರಣ್ಯ ಭೂಮಿಯಿದ್ದು, 28,227 ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಬೆಳೆ ಬೆಳೆಯಲಾಗಿದೆ. 19,677 ಹೆಕ್ಟೇರ್‌ನಲ್ಲಿ ತೋಟಗಾರಿಕಾ ಬೆಳೆಯಿದ್ದು, ಅದರಲ್ಲಿ 8,860 ಹೆಕ್ಟೇರ್‌ನಲ್ಲಿ ಅಡಿಕೆ, 6,600 ಹೆಕ್ಟೇರ್ ವಿಸ್ತೀರ್ಣದಲ್ಲಿ ತೆಂಗು, 777 ಹೆಕ್ಟೇರ್‌ನಲ್ಲಿ ಗೇರು, 2,000 ಹೆಕ್ಟೇರ್‌ ರಬ್ಬರ್ ಕೃಷಿ ಮಾಡಲಾಗಿದೆ.

ತೋಟಗಾರಿಕಾ ಬೆಳೆಗಳ ಪೈಕಿ ಅಡಿಕೆ ಬೆಳೆಯೇ ಹೆಚ್ಚಿದ್ದು, ರೈತರು ಅಡಿಕೆ ಮಿಡಿ ಉದುರುತ್ತಿರುವುದರಿಂದ ಈ ವರ್ಷ ಆದಾಯ ಕುಂಠಿತವಾಗುವ ಭೀತಿ ಎದುರಿಸುತ್ತಿದ್ದಾರೆ.

ಕರಾವಳಿ ಭಾಗದಲ್ಲಿ ಅಡಿಕೆ ಕೃಷಿಯೇ ಹೆಚ್ಚಾಗಿದ್ದು, ‌ಬಿಸಿಲಿನ ತಾಪ ಹೆಚ್ಚಿದ ಕಾರಣ ಬೆಳೆಗಳಿಗೆ ಸಮಸ್ಯೆಯಾಗಿದೆ. ಎಳೆ ಅಡಿಕೆ ಉದುರುತ್ತಿದ್ದು, ಅಂತರ್ಜಲವೂ ಕುಸಿತಗೊಂಡಿದೆ. ಇದರಿಂದಾಗಿ ಕೆಲವೆಡೆ ಅಡಿಕೆ ತೋಟಗಳಿಗೆ ನೀರಿಲ್ಲದೆ ಸಮಸ್ಯೆ ಉಂಟಾಗಿದೆ.  ಇನ್ನೂ ಕೆಲವೆಡೆ ಅಧಿಕ ನೀರು ಉಣಿಸಿರುವುದು ಸಮಸ್ಯೆಗೆ ಕಾರಣವಾಗಿದೆ.

ಕರಾವಳಿ ಪ್ರದೇಶದ ಮಣ್ಣಿನಲ್ಲಿ ಆಮ್ಲೀಯ ಅಂಶ ಹೆಚ್ಚಿರುವುದರಿಂದ ಸುಣ್ಣ ಹಾಕುವುದು ಅಗತ್ಯ. ರಾಸಾಯನಿಕ ಗೊಬ್ಬರ, ಸಾವಯವ ಗೊಬ್ಬರವನ್ನು ಪ್ರಮಾಣ ಬದ್ಧವಾಗಿ ನೀಡಬೇಕು. ಪೊಟ್ಯಾಷ್ ಅಂಶವನ್ನು ನೀಡಿದರೆ ಮುಂದಿನ ಫಸಲಿನಲ್ಲಿ ಹೆಚ್ಚಳವಾಗಲಿದೆ. ಬಸಿ ಕಾಲುವೆಗಳ ನಿರ್ಮಾಣ, ಪೋಷಕಾಂಶ ನೀಡುವುದರಿಂದ ಎಳೆ ಅಡಿಕೆ ಉದುರುವುದು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT