ಸೋಮವಾರ, ಡಿಸೆಂಬರ್ 5, 2022
21 °C

ಬೊಮ್ಮರಬೆಟ್ಟು: ₹ 1.70 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಿರಿಯಡಕ: ಹಿರಿಯಡಕದ ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 1.70 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ‌ ಲಾಲಾಜಿ ಆರ್. ಮೆಂಡನ್ ಭಾನುವಾರ ಶಿಲಾನ್ಯಾಸ ನೆರವೇರಿಸಿದರು.

ತಲಾ ₹20 ಲಕ್ಷ ಮೊತ್ತದಲ್ಲಿ ಶೀಂಬ್ರ ರಸ್ತೆ ಅಭಿವೃದ್ಧಿ, ಮಾಣೈ ಸ್ಮಶಾನ ರಸ್ತೆ, ಮಾಣೈ ಬೋರ್ಗಲ್ ಗುಡ್ಡೆ ರಸ್ತೆ, ಪಂಚನಬೆಟ್ಟು ಮಾಡಗುಡ್ಡೆ ರಸ್ತೆ, ಕೊಂಡಾಡಿ ಶಾಲೆಯ ಬಳಿ ರಸ್ತೆ, ಮಾದ್ರಿಗುಡ್ಡೆ ರಸ್ತೆ ಅಭಿವೃದ್ಧಿ ಹಾಗೂ ತಲಾ
₹ 10 ಲಕ್ಷ ಮೊತ್ತದಲ್ಲಿ ಪಾಪುಜೆ ಮಠದ ರಸ್ತೆ, ಬಸ್ತಿ ಕಾಲೊನಿ ರಸ್ತೆ, ಮೈಕಾಲ ಭಂಡಾರಿ ಬೆಟ್ಟು ರಸ್ತೆಯಿಂದ ಸೀತಾರಾಮ ಪ್ರಭು ಮನೆ ಬಳಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಲಾಲಾಜಿ ಮೆಂಡನ್‌, ‘10 ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಬಹು ಬೇಡಿಕೆಯ ಕೊಟ್ನಕಟ್ಟೆ ಗುಡ್ಡೆಯಂಗಡಿ ರಸ್ತೆಗೆ ₹ 3 ಕೋಟಿ ಅನುದಾನದ ಟೆಂಡರ್ ಆಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಪಂಚನಬೆಟ್ಟು ರಸ್ತೆಗೆ ₹ 1 ಕೋಟಿ ಅನುದಾನ ಮಂಜೂರುಗೊಂಡಿದ್ದು, ಟೆಂಡರ್ ಹಂತದಲ್ಲಿದೆ ಎಂದರು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಗ್ರಾಮ ಪಂಚಾಯಿತಿ ಸದಸ್ಯರಾದ ಸುನಿಲ್ ಶೆಟ್ಟಿ, ನಾರಾಯಣ್, ಗೀತಾ ದಯಾನಂದ, ದಿನೇಶ್ ಮೆಂಡನ್, ಜಯಂತಿ ಶೆಟ್ಟಿ, ಶಬರಿ, ಹರೀಶ್ ಸಾಲ್ಯಾನ್, ಸಂಗೀತಾ, ರಾಘವೇಂದ್ರ ನಾಯಕ್, ಉಮೇಶ್ ಶೆಟ್ಟಿ, ಅರುಣಾ, ಕೊಡಿಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ ಶೆಟ್ಟಿ, ಗುತ್ತಿಗೆದಾರರಾದ ಸತೀಶ್ ಶೆಟ್ಟಿ ಬೈರಂಪಳ್ಳಿ, ಪ್ರಕಾಶ್, ದಯಾನಂದ ಪೂಜಾರಿ, ಅಶೋಕ್ ಜೋಗಿ, ವಿಜಯ್, ನಿತ್ಯಾನಂದ ಪೂಜಾರಿ, ರತ್ನಾಕರ್ ಶೆಟ್ಟಿ, ಸಂಧ್ಯಾ ಕಾಮತ್, ಸುನೀತಾ ನಾಯ್ಕ್, ಗಿರೀಶ್ ಕುಜಂಬೈಲು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು