ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವಾಸದ ಮನೆ’ಗೆ ನೆರವಿನ ನಿರೀಕ್ಷೆ

ಪ್ರಕಾಶ ಸುವರ್ಣ ಕಟಪಾಡಿ
Published 21 ಏಪ್ರಿಲ್ 2024, 7:06 IST
Last Updated 21 ಏಪ್ರಿಲ್ 2024, 7:06 IST
ಅಕ್ಷರ ಗಾತ್ರ

ಶಿರ್ವ: ಅನಾಥರು ಮತ್ತು ಮಾನಸಿಕ ಅಸ್ವಸ್ಥರ ಆಶಾಕಿರಣವಾಗಿರುವ ‘ವಿಶ್ವಾಸದ ಮನೆ’ ಈಗ ಸಂಕಷ್ಟ ಅನುಭವಿಸುತ್ತಿದ್ದು ನೆರವಿನ ನಿರೀಕ್ಷೆಯಲ್ಲಿದೆ. 

ಉಡುಪಿ ಜಿಲ್ಲೆಯ ಶಂಕರಪುರದಲ್ಲಿರುವ ಈ ಸಂಸ್ಥೆ ವಿವಿಧ ರಾಜ್ಯಗಳ 200ಕ್ಕೂ ಅಧಿಕ ಮಾನಸಿಕ ಅಸ್ವಸ್ಥರು, ನಿರ್ಗತಿಕರು, ವೃದ್ಧರು ಮತ್ತು ಮಕ್ಕಳ ಆಶ್ರಯತಾಣವಾಗಿದೆ. ‘ಸರ್ಕಾರ ಹಾಗೂ ದಾನಿಗಳಿಂದ ಪೂರಕ ನೆರವು ಸಿಗದ ಕಾರಣ ತೊಂದರೆಯಾಗಿದೆ’ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.

‘20 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ವಿಶ್ವಾಸದಮನೆ ಕೋವಿಡ್‌–19ರ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಸದ್ಯ ಇಲ್ಲಿ ಆಶ್ರಯ ಪಡೆಯುತ್ತಿರುವವರಿಗಾಗಿ ಆಹಾರ, ಬಟ್ಟೆ ಮತ್ತು ಚಿಕಿತ್ಸೆ ನೀಡಲು ಕಷ್ಟವಾಗುತ್ತಿದೆ. ಕೆಲವು ತಿಂಗಳಿಂದ ಸಿಬ್ಬಂದಿಗೆ ವೇತನ ನೀಡುವುದಕ್ಕೂ ತೊಂದರೆ ಆಗುತ್ತಿದೆ’ ಎಂಬುದು ಸಂಸ್ಥೆಯವರ ಅಳಲು.

ಶಂಕರಪುರದ ಸಮಾಜ ಸೇವಕ, ಪಾಸ್ಟರ್ ಸುನಿಲ್ ಜಾನ್ ಡಿಸೋಜಾ ವಿಶ್ವಾಸದಮನೆ ಪುನರ್ವಸತಿ ಕೇಂದ್ರವನ್ನು ಬಾಡಿಗೆ ಮನೆಯಲ್ಲಿ ಆರಂಭಿಸಿದ್ದರು. ನಂತರ ಸ್ವಂತ ಕಟ್ಟಡವಾಯಿತು. ವಿಶ್ವಾಸದ ಮನೆ, ಜಿಲ್ಲಾಧಿಕಾರಿ ನಿರ್ದೇಶನದಂತೆ ಕುಂದಾಪುರ ಸ್ಫೂರ್ತಿ ಧಾಮದ 31 ಮಂದಿಗೆ 4 ವರ್ಷಗಳಿಂದ ಆಶ್ರಯ ನೀಡುತ್ತಿದೆ. ಆದರೆ ಸರ್ಕಾರದಿಂದ ಅನುದಾನ ಸಿಕ್ಕಿಲ್ಲ ಎನ್ನಲಾಗಿದೆ.

‘ಈ ವರೆಗೆ ಅನೇಕ ಸಂಘ ಸಂಸ್ಥೆಗಳು, ಸಹೃದಯಿಗಳು ನೆರವು ನೀಡಿ ಸಂಸ್ಥೆಯನ್ನು ಪ್ರೋತ್ಸಾಹಿಸಿದ್ದಾರೆ. ಆದರೆ ಈಗ ಯಾವ ಮೂಲಗಳಿಂದಲೂ ಸಹಾಯ ದೊರೆಯುತ್ತಿಲ್ಲ. ಆದ್ದರಿಂದ ದಾನಿಗಳು ಆರ್ಥಿಕ ನೆರವು ನೀಡಬೇಕು, ಜಿಲ್ಲಾಡಳಿತ ಅನುದಾನ ಒದಗಿಸಬೇಕು’ ಎಂದು ಸುನಿಲ್ ಜಾನ್ ಡಿಸೋಜಾ ಮನವಿ ಮಾಡಿದರು. ಮಾಹಿತಿಗೆ 9663431597 ಸಂಪರ್ಕಿಸುವಂತೆ ವ್ಯವಸ್ಥಾಪಕ ಬಾಬು ಮ್ಯಾಥ್ಯೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT