ಬೆಲೆ ಏರಿಕೆ ವಿರುದ್ಧ ಭಾರತ ಬಂದ್ 10ಕ್ಕೆ: ಕಾಂಗ್ರೆಸ್‌ನಿಂದ ಕರೆ

7

ಬೆಲೆ ಏರಿಕೆ ವಿರುದ್ಧ ಭಾರತ ಬಂದ್ 10ಕ್ಕೆ: ಕಾಂಗ್ರೆಸ್‌ನಿಂದ ಕರೆ

Published:
Updated:

ಶಿರಸಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಬೇಳೆ–ಕಾಳು ಸೇರಿದಂತೆ ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಅಖಿಲ ಭಾರತ್ ಕಾಂಗ್ರೆಸ್‌ ಸಮಿತಿ ಸೆ.10ರಂದು ಕರೆಕೊಟ್ಟಿರುವ ಭಾರತ ಬಂದ್‌ಗೆ ಜಿಲ್ಲೆಯ ಜನರು ಬೆಂಬಲ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ವಿನಂತಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರು, ವ್ಯಾಪಾರಸ್ಥರು, ವಾಹನಗಳ ಚಾಲಕ, ಮಾಲೀಕರು, ಸಂಘ–ಸಂಸ್ಥೆಗಳು ಎಲ್ಲರೂ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಶಾಲಾ, ಕಾಲೇಜುಗಳ ಮುಖ್ಯಸ್ಥರು ಸಹ ಸ್ವಯಂಪ್ರೇರಿತರಾಗಿ ಬಂದ್ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಿಸಿ ಮುಟ್ಟಿಸಬೇಕು. ಕೃಷಿ ಯಂತ್ರೋಪಕರಣಗಳಿಗೆ ಬಳಸುವ ಇಂಧನ ಬೆಲೆ ಹೆಚ್ಚಾಗಿರುವ ಕಾರಣ ರೈತರಿಗೂ ತೊಂದರೆಯಾಗಿದೆ’ ಎಂದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಲೀಟರ್‌ವೊಂದಕ್ಕೆ ₹ 70 ಇದ್ದ ಪೆಟ್ರೋಲ್ ಬೆಲೆ, ಈಗ ₹ 80ಕ್ಕೆ, ₹ 55 ಇದ್ದ ಡೀಸೆಲ್ ಬೆಲೆ ₹ 70ಕ್ಕೆ ಹೆಚ್ಚಳವಾಗಿದೆ. ಜನರ ಜೀವನ ಮಟ್ಟದ ಮೇಲೆ ದುಷ್ಪರಿಣಾಮ ಬೀರಿರುವ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸುವುದು ಅನಿವಾರ್ಯವಾಗಿದೆ. ಒತ್ತಡ ಹಾಕಿ ಅಂಗಡಿಗಳನ್ನು ಬಂದ್ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುವುದಿಲ್ಲ ಎಂದು ಹೇಳಿದರು.

‘ನಗರಸಭೆ ಚುನಾವಣೆಯ ಫಲಿತಾಂಶ ಜನರು ಕೊಟ್ಟ ತೀರ್ಮಾನವಾಗಿದೆ. ಇದನ್ನು ಸ್ವೀಕರಿಸಿ, ಕಾಂಗ್ರೆಸ್, ವಿರೋಧ ಪಕ್ಷದ ಸ್ಥಾನವನ್ನು ನಿಭಾಯಿಸುತ್ತದೆ. ಆಪರೇಷನ್ ಕಮಲ ನಡೆಸುವ ಅನಿವಾರ್ಯತೆ ನಮಗೆ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಟಿಎಸ್ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ, ಪ್ರಮುಖರಾದ ಎಸ್.ಕೆ.ಭಾಗವತ, ಅಬ್ಬಾಸ್ ತೋನ್ಸೆ, ಸುಮಾ ಉಗ್ರಾಣಕರ, ಸೂರ್ಯಪ್ರಕಾಶ ಹೊನ್ನಾವರ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !