ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡದಿಂದ ಗುಡ್ಡಕ್ಕೆ ಅಲೆ ತಡೆಗೋಡೆ!

ಬೆಳಂಬಾರದಲ್ಲಿ ದೋಣಿಗಳ ಸುರಕ್ಷತೆಗಾಗಿ ಮೀನುಗಾರಿಕಾ ಇಲಾಖೆಯಿಂದ ಕಾಮಗಾರಿ
Last Updated 27 ನವೆಂಬರ್ 2019, 19:31 IST
ಅಕ್ಷರ ಗಾತ್ರ

ಕಾರವಾರ: ಅಂಕೋಲಾ ತಾಲ್ಲೂಕಿನ ಬೆಳಂಬಾರದಲ್ಲಿ ಮೀನುಗಾರಿಕಾ ದೋಣಿಗಳ ಸುರಕ್ಷತೆಗಾಗಿ ಅಲೆ ತಡೆಗೋಡೆ ನಿರ್ಮಾಣವಾಗಲಿದೆ.ಸುಮಾರು ₹ 200 ಕೋಟಿ ವೆಚ್ಚದ ಈ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ.

2013ರಲ್ಲಿ ಯೋಜನೆಗೆ ಸಿದ್ಧತೆ ಆರಂಭಿಸಿದಾಗ ಕಾಮಗಾರಿಗೆ ₹ 44 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಕಾರಣಾಂತರಗಳಿಂದಕಾಮಗಾರಿಯಜಾರಿ ಪ್ರಕ್ರಿಯೆ ವಿಳಂಬವಾಯಿತು. ಈಗ ಯೋಜನೆಯನ್ನು ಮತ್ತಷ್ಟು ಉನ್ನತೀಕರಿಸಿ, ವಿವಿಧ ಸೌಲಭ್ಯಗಳನ್ನು ಒಳಗೊಂಡ ಕಿರು ಮೀನುಗಾರಿಕಾ ಬಂದರು ನಿರ್ಮಾಣಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಗುಡ್ಡದಿಂದ ಗುಡ್ಡಕ್ಕೆ:ಬೆಳಂಬಾರ ಪರಿಸರದಲ್ಲಿ ಸಮುದ್ರದ ಅಲೆಗಳು ಜೋರಾಗಿರುತ್ತವೆ ಹಾಗೂ ಸದಾ ಅನಿಶ್ಚಿತತೆಯಿಂದ ಕೂಡಿರುತ್ತವೆ. ಈ ಪ್ರದೇಶಮೀನುಗಾರಿಕಾ ದೋಣಿಗಳಿಗೆ ಅಷ್ಟೊಂದು ಸುರಕ್ಷಿತವಲ್ಲ ಎಂದು ಭಾವಿಸಲಾಗಿದೆ. ಹಾಗಾಗಿ ಸಮುದ್ರದ ನಡುವಿನ ಗುಡ್ಡದಿಂದ ತೀರದಲ್ಲಿರುವ ಗುಡ್ಡದವರೆಗೆ ತಡೆಗೋಡೆ ನಿರ್ಮಿಸಿದರೆಅಲೆಗಳ ವೇಗವನ್ನುಕಡಿಮೆ ಮಾಡಲು ಸಾಧ್ಯವಿದೆ.

ಇದರೊಂದಿಗೇಇಲ್ಲಿನಜೆಟ್ಟಿಯ ಮತ್ತಷ್ಟುಸಮೀಪಕ್ಕೆ ದೋಣಿಗಳು ಬರಲು ಸಾಧ್ಯವಾಗುತ್ತದೆ. ಈ ಕಾಮಗಾರಿಯಿಂದ ಬೆಳಂಬಾರ, ಕೇಣಿ, ಮಂಜಗುಣಿ ಸುತ್ತಮುತ್ತಲಿನ ಮೀನುಗಾರರಿಗೆ ಅನುಕೂಲವಾಗಲಿದೆ ಎನ್ನುವುದು ಮೀನುಗಾರಿಕಾ ಇಲಾಖೆ ಅಧಿಕಾರಿಗಳ ವಿಶ್ವಾಸವಾಗಿದೆ.

‘ಕಾಮಗಾರಿಯ ಸಂಬಂಧ 2015ರಏಪ್ರಿಲ್ ತಿಂಗಳಲ್ಲಿ ಸ್ಥಳೀಯ ಮೀನುಗಾರರೊಂದಿಗೆ ಅಧಿಕಾರಿಗಳು ಸಭೆ ನಡೆಸಿ ಮಾಹಿತಿ ನೀಡಿದ್ದರು. ಅಲ್ಲದೇ ಬೆಂಗಳೂರಿನ, ಮೀನುಗಾರಿಕೆಗಾಗಿಕರಾವಳಿಎಂಜಿನಿಯರಿಂಗ್‌ನ ಕೇಂದ್ರೀಯ ಸಂಸ್ಥೆಯ (ಸಿಐಸಿಇಎಫ್) ಸಲಹೆಯನ್ನೂ ಪಡೆಯಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಅನುಮತಿ ಸಿಕ್ಕಿದೆ. ಹಾಗಾಗಿ ಕೆಲಸ ಆರಂಭಿಸಲು ಉತ್ಸುಕರಾಗಿದ್ದೇವೆ’ ಎಂದು ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಿ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘2016ರಲ್ಲಿ ಕಾಮಗಾರಿಯ ಟೆಂಡರ್‌ ತೆರೆದಾಗಗುತ್ತಿಗೆ ಪಡೆಯಲು ಆರು ಸಂಸ್ಥೆಗಳು ಮುಂದೆ ಬಂದಿದ್ದವು. ಅವುಗಳ ಪೈಕಿ ಹೈದರಾಬಾದ್‌ನ ಅನಲ್ಯಾಬ್ ಸಂಸ್ಥೆಯ ಜೊತೆ ಒಪ್ಪಂದವಾಗಿದೆ. 2017ರ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಉಲ್ಲೇಖಿಸಿದ ನಿಯಮಗಳ ಪ್ರಕಾರ ಯೋಜನೆ ಜಾರಿಯಾಗಲಿದೆ.ಬಂದರು ಇಲಾಖೆಯ ಎಂಜಿನಿಯರಿಂಗ್ ವಿಭಾಗದ ಮೂಲಕವೇ ಕಾಮಗಾರಿ ಮುಂದುವರಿಯಲಿದೆ’ ಎಂದು ಅವರು ಮಾಹಿತಿ ನೀಡಿದರು.

ಏನೇನು ಸೌಲಭ್ಯಗಳು ಇರಲಿವೆ?:ಬೆಳಂಬಾರದಲ್ಲಿ ಅಲೆ ತಡೆಗೋಡೆ ಕಾಮಗಾರಿಯೊಂದಿಗೇ ಹಲವು ಸೌಲಭ್ಯಗಳ ನಿರ್ಮಾಣವಾಗಲಿದೆ. ಜೆಟ್ಟಿ, ಮೀನು ಹರಾಜು ಪ್ರಾಂಗಣ, ಕಚೇರಿ, ವಿಶ್ರಾಂತಿ ಕೊಠಡಿ, ಬಲೆ ನಿರ್ವಹಣಾ ಕೊಠಡಿ, ಶೌಚಾಲಯ, ಡೀಸೆಲ್ ಬಂಕ್, ಶೀತಲೀಕರಣ ಸೌಕರ್ಯ, ವಾಹನ ನಿಲುಗಡೆಗೆ ವ್ಯವಸ್ಥೆ, ಸಂಪರ್ಕ ರಸ್ತೆ ಹಾಗೂ ಆವರಣ ಗೋಡೆಯ ಕೆಲಸಗಳು ಪೂರ್ಣಗೊಳ್ಳಲಿವೆ.

ಈಗಿನ ಜೆಟ್ಟಿಯ ಸಮೀಪ ಸಮುದ್ರದಲ್ಲಿರುವ ಬಂಡೆಗಳನ್ನು ತೆರವುಗೊಳಿಸಿ, ಹೂಳೆತ್ತಲಾಗುತ್ತದೆ. ಇದರಿಂದ ದೋಣಿಗಳು ಮತ್ತಷ್ಟು ಮುಂದೆಬಂದು ಲಂಗರು ಹಾಕಲುಅವಕಾಶವಾಗಲಿದೆ ಎಂದು ನಾಗರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

––––

ಅಲೆ ತಡೆಗೋಡೆ: ‌ಅಂಕಿ– ಅಂಶ

1,000 ಮೀಟರ್

ಉದ್ದ

₹ 200 ಕೋಟಿ

ಅಂದಾಜು ವೆಚ್ಚ

50 ದೋಣಿಗಳು

ಲಂಗರು ಹಾಕಲು ಅವಕಾಶ

2013

ಯೋಜನೆರೂಪಿಸಿದವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT