ಅಡಿಕೆ ತೋಟಕ್ಕೆ ಹಾನಿ: ಭೂ ಕುಸಿತ

7

ಅಡಿಕೆ ತೋಟಕ್ಕೆ ಹಾನಿ: ಭೂ ಕುಸಿತ

Published:
Updated:
Deccan Herald

ಶಿರಸಿ: ತಾಲ್ಲೂಕಿನಲ್ಲಿ ಬುಧವಾರ ಮಳೆಯ ಪ್ರಮಾಣ ತಗ್ಗಿದರೂ, ಮೋಡ ಹಾಗೂ ಚಳಿಯ ವಾತಾವರಣ ಮುಂದುವರಿದಿದೆ. ಆಗಾಗ ಬಿಡುವುಕೊಟ್ಟು ಮಳೆ ಸುರಿಯುತ್ತಿದೆ.

ತಾಲ್ಲೂಕಿನ ದೇವನಳ್ಳಿ ಪಂಚಾಯ್ತಿಯ ಬೆಣಗಾಂವ ನಡಗೋಡಿನಲ್ಲಿ ರಭಸದ ಮಳೆಯಿಂದಾಗಿ ಹಳ್ಳಕ್ಕೆ ನೀರು ಹೋಗಲು ಅಳವಡಿಸಿದ್ದ ಪೈಪ್ ಸರಿದು, ಗ್ರಾಮಕ್ಕೆ ತೆರಳುವ ಮಾರ್ಗ ಕುಸಿದು ಬಿದ್ದಿದೆ. ನಡಗೋಡ ಅಕ್ಕಪಕ್ಕದ ಮಜಿರೆಗಳಿಗೆ ಹೋಗುವ ಮುಖ್ಯ ಮಾರ್ಗ ಇದಾಗಿದ್ದು, ಜನರು ಪರದಾಡುವಂತಾಗಿದೆ.

ನಿರಂತರ ಮಳೆಯಾಗುತ್ತಿರುವ ಪರಿಣಾಮ ಮತ್ತಿಘಟ್ಟ ಭಾಗದಲ್ಲಿ ಅಡಿಕೆ ತೋಟಕ್ಕೆ ಕೊಳೆರೋಗ ಆವರಿಸಿದೆ. ಸರ್ವೆ ಸಂಖ್ಯೆ 154ರಲ್ಲಿ ಭೂಕುಸಿತ ಉಂಟಾದ ಪರಿಣಾಮ ಅಲ್ಲಿನ ಕಾಲುವೆ ಒಡೆದಿದೆ. ಇದರಿಂದ ಅಡಿಕೆ ತೋಟಕ್ಕೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ.

ಬನವಾಸಿಯಲ್ಲಿ ವರದಾ ನದಿ ತುಂಬಿ ಹರಿಯುತ್ತಿದ್ದು, ನಿಧಾನವಾಗಿ ಸುತ್ತಲಿನ ಭತ್ತದ ಗದ್ದೆಗಳನ್ನು ಆವರಿಸುತ್ತಿದೆ. ಬದನಗೋಡ ಪಂಚಾಯ್ತಿ ವ್ಯಾಪ್ತಿಯ ರಂಗಾಪುರ, ಕುಪ್ಪಗಡ್ಡೆಗಳಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಕೆರೆಗಳು ತುಂಬಿವೆ. ಏರಿ ಒಡೆದು, ರೈತರ ಕೃಷಿಭೂಮಿಗೆ ನೀರು ನುಗ್ಗುವ ಪೂರ್ವದಲ್ಲಿ ಮುನ್ನೆಚ್ಚರಿಕೆ ವಸಹಿಸಬೇಕು ಎಂದು ಬುಧವಾರ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ, ಅಧಿಕಾರಿಗಳಿಗೆ ತಿಳಿಸಿದರು. ತಾಲ್ಲೂಕಿನಲ್ಲಿ ಈವರೆಗೆ 2238 ಮಿ.ಮೀ ಮಳೆಯಾಗಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !