ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಲ್ಲೆಯಲ್ಲಿ ಸ್ಕೂಬಾ ಡೈವಿಂಗ್‌ ಮೈಲಿಗಲ್ಲು’

ಮುರ್ಡೇಶ್ವರದಲ್ಲಿ ‘ಸ್ಕೂಬಾ ಡೈವಿಂಗ್ ಉತ್ಸವ’: ಸಮುದ್ರದಾಳದ ಬೆರಗು ವೀಕ್ಷಣೆ
Last Updated 29 ಫೆಬ್ರುವರಿ 2020, 13:42 IST
ಅಕ್ಷರ ಗಾತ್ರ

ಕಾರವಾರ: ‘ಸ್ಕೂಬಾ ಡೈವಿಂಗ್ ಮೈನವಿರೇಳಿಸುವಂಥ ಸಾಹಸ ಕ್ರೀಡೆಯಾಗಿದೆ.ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಇದಕ್ಕೆಉನ್ನತ ಸ್ಥಾನವಿದೆ’ಎಂದು ಭಟ್ಕಳ ಶಾಸಕ ಸುನೀಲ್ ನಾಯ್ಕ ಹೇಳಿದರು.

ನೇತ್ರಾಣಿಯಲ್ಲಿ ಜಿಲ್ಲಾಡಳಿತದಿಂದ ಶನಿವಾರ ಹಮ್ಮಿಕೊಂಡ ‘ಸ್ಕೂಬಾ ಡೈವಿಂಗ್ ಉತ್ಸವ’ದ ಸಭಾ ಕಾರ್ಯಕ್ರಮವನ್ನು ಮುರ್ಡೇಶ್ವರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಪಂಚದಲ್ಲಿ ಕೆಲವೆಡೆ ಮಾತ್ರ ಲಭ್ಯವಿರುವ ಸ್ಕೂಬಾ ಡೈವಿಂಗ್ ಮುರ್ಡೇಶ್ವರದಲ್ಲೂ ಇದೆ ಎಂಬುದು ನನಗೆ ನೇಪಾಳ ಪ್ರವಾಸಕ್ಕೆ ಹೋದಾಗ ತಿಳಿಯಿತು. ನಿರೀಕ್ಷಿತ ಮಟ್ಟದಲ್ಲಿ ಸ್ಕೂಬಾ ಡೈವಿಂಗ್ ಯಶಸ್ಸು ಕಾಣದಿರಲು ಪ್ರಚಾರದ ಕೊರತೆಯೇ ಕಾರಣವಾಗಿದೆ. ಜಿಲ್ಲೆ ಹಾಗೂ ಹೊರಜಿಲ್ಲೆಗಳ ಜನರಿಗೆ ಇದರ ಬಗ್ಗೆ ತಿಳಿಸುವ ಕೆಲಸವಾಗಬೇಕು. ಸುರಕ್ಷತೆಯ ದೃಷ್ಟಿಕೋನದಿಂದಲೂ ಪ್ರವಾಸಿಗರಲ್ಲಿ ಧೈರ್ಯ ತುಂಬುವ ಕೆಲಸವಾಗಬೇಕು’ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಪ್ರವಾಸೋದ್ಯಮದ ಅಭಿವೃದ್ಧಿಗೆ ಜಿಲ್ಲಾಡಳಿತವು ಹೆಚ್ಚಿನ ಒತ್ತು ನೀಡಿದೆ. ಆದರೆ, ಎಲ್ಲವನ್ನೂಸರ್ಕಾರವೇ ಮಾಡಲು ಸಾಧ್ಯವಿಲ್ಲ. ಸ್ಕೂಬಾ ಡೈವಿಂಗ್ ಯಶಸ್ಸಿಗೆ ಖಾಸಗಿ ವ್ಯಕ್ತಿಗಳು ಕೈಜೋಡಿಸಬೇಕು. ಇದರಿಂದ ಇನ್ನಷ್ಟು ಉತ್ತೇಜನ ದೊರೆಯುವುದರ ಜೊತೆಗೆ ಪ್ರವಾಸೋದ್ಯಮವೂ ಬೆಳೆಯುಲಿದೆ. ಸೂಕ್ತ ಪ್ರಚಾರ ಸಿಗದಿದ್ದರೆಶ್ರಮ ವ್ಯರ್ಥವಾಗಿಬಿಡುತ್ತದೆ’ ಎಂದು ತಿಳಿಸಿದರು.

‘ಡೈವಿಂಗ್ ನಡೆಸಲು ಸಾಹಸಿಗಳು ಮುಂದೆ ಬರಬೇಕು. ಅಂಡಮಾನ್‌ ಹೊರತಾಗಿ ಸ್ಕೂಬಾ ಡೈವಿಂಗ್ ಇರುವುದು ನಮ್ಮಲ್ಲಿ ಮಾತ್ರ. ಜೊತೆಗೆ ಇಲ್ಲಿರುವ ಶುದ್ಧ ನೀರು ಅಲ್ಲಿಸಿಗುವುದಕ್ಕೆ ಸಾಧ್ಯವಿಲ್ಲ. ದೇಶದಲ್ಲಿ ವ್ಯವಸ್ಥಿತವಾಗಿರುವಏಕೈಕ ಸ್ಕೂಬಾ ಡೈವಿಂಗ್ ಇದಾಗಿದೆ.ಇಲ್ಲಿರಕ್ಷಣೆಗೂಹೆಚ್ಚಿನ ಮಹತ್ವ ನೀಡಲಾಗಿದ್ದು, ಜಿಲ್ಲಾಡಳಿತವೂ ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ನೇತ್ರಾಣಿಯುಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂಥ ಕೇಂದ್ರ. ಇದರ ಯಶಸ್ಸು ಪ್ರವಾಸಿಗರ ಕೈಯಲ್ಲಿದೆ’ ಎಂದರು.

ಭಟ್ಕಳ‌ಉಪವಿಭಾಗಾಧಿಕಾರಿಸಾಜೀದ್ ಮುಲ್ಲಾರಾ ಹಾಗೂವಿವಿಧ ಇಲಾಖಾ ಅಧಿಕಾರಿಗಳುಇದ್ದರು. ಸಭಾ ಕಾರ್ಯಕ್ರಮದ ನಂತರ ಮೂರು ದೋಣಿಗಳಲ್ಲಿ 50ಕ್ಕೂ ಹೆಚ್ಚು ಮಂದಿ ನೇತ್ರಾಣಿ ಗುಡ್ಡಕ್ಕೆ ಪ್ರಯಾಣ ಬೆಳೆಸಿದರು. ಒಂದು ಗಂಟೆ ಅವಧಿಯ ಪ್ರಯಾಣದ ನಂತರ ಸ್ಕೂಬಾ ಡೈವಿಂಗ್ ನಡೆಸುವವರಿಗೆ ವಿಶೇಷ ತರಬೇತಿ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಲಾಯಿತು. ಜಿಲ್ಲಾಡಳಿತವೂ ಜಲಸಾಹಸ ಕ್ರೀಡೆಯಲ್ಲಿ ಭಾಗಿಯಾಗಿ ಸಂಭ್ರಮಿಸಿತು.

50 ಸಾವಿರ ಮಂದಿ ಡೈವಿಂಗ್!:‘ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌ಗೆ ಭಾರತೀಯ ನೌಕಾನೆಲೆಸಿಬ್ಬಂದಿಯಿಂದ ತರಬೇತಿ ನೀಡಲಾಗುತ್ತದೆ. 2011ರಲ್ಲಿ ಆರಂಭಗೊಂಡ ನಂತರ ಇಲ್ಲಿವರೆಗೆ 50 ಸಾವಿರಕ್ಕೂ ಹೆಚ್ಚು ಮಂದಿ ಡೈವಿಂಗ್ ನಡೆಸಿದ್ದಾರೆ. ಇಲ್ಲಿ ವಿಶೇಷ ಜೀವ ವೈವಿಧ್ಯತೆಗಳಿದ್ದು ಇವುಗಳ‌ ಸಂರಕ್ಷಣೆ ಆಗಬೇಕು’ಎಂದುಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT