ಸಾತೊಡ್ಡಿ: ವಿದ್ಯಾರ್ಥಿಯ ಮೃತದೇಹ ಪತ್ತೆ

7

ಸಾತೊಡ್ಡಿ: ವಿದ್ಯಾರ್ಥಿಯ ಮೃತದೇಹ ಪತ್ತೆ

Published:
Updated:
Deccan Herald

ಯಲ್ಲಾಪುರ: ಸಾತೊಡ್ಡಿ ಜಲಪಾತದಲ್ಲಿ ಕಾಣೆಯಾಗಿದ್ದ ವಿದ್ಯಾರ್ಥಿ ಯೂಸುಫ್‌ ಅಲ್ಲಾವುದ್ದೀನ್ ಬಟ್ಟಿ (19) ಮೃತದೇಹವು ಮೂರು ದಿನಗಳ ಹುಡುಕಾಟದ ನಂತರ ಶುಕ್ರವಾರ ಪತ್ತೆಯಾಗಿದೆ.

ಜಲಪಾತದಿಂದ ಸುಮಾರು 500 ಮೀಟರ್ ದೂರದ ಹಿನ್ನೀರಿನಲ್ಲಿ ಆತನ ಶವ ಕಂಡುಬಂದಿತು. ಮುಂಡಗೋಡ ತಾಲ್ಲೂಕಿನ ಗಾಂಧಿನಗರದ ನಿವಾಸಿಯಾಗಿದ್ದ ಆತ, ಸ್ಥಳೀಯ ಪದವಿ ಕಾಲೇಜಿನಲ್ಲಿ ಬಿ.ಎ ದ್ವಿತೀಯ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದ.

ಕಾಲೇಜಿನ 14 ಸ್ನೇಹಿತರು ಜತೆಯಾಗಿ ಬುಧವಾರ ಸಂಜೆ ಸಾತೊಡ್ಡಿ ಜಲಪಾತ ವೀಕ್ಷಣೆಗೆ ಬಂದಿದ್ದರು. ಆಗ ಯೂಸುಫ್ ಕಾಲು ಜಾರಿ ನೀರಿನಲ್ಲಿ ಬಿದ್ದು ಕಾಣೆಯಾಗಿದ್ದ. ಪೊಲೀಸ್ ಇಲಾಖೆ, ಅಗ್ನಿಶಾಮಕದಳ ಹಾಗೂ ಸ್ಥಳೀಯ ಗ್ರಾಮಸ್ಥರು ತೀವ್ರ ಹುಡುಕಾಟ ನಡೆಸಿದ್ದರು. ಮೃತದೇಹವು ಶುಕ್ರವಾರ ನೀರಿನಿಂದ ಹೊರ ಬಂದು ಕಾಣಿಸಿಕೊಂಡಿತು.

ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !