ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಲ್ಲಾಪುರ | ಲಾರಿ ಡಿಕ್ಕಿ: ಬೈಕ್‌ ಸವಾರ ಸಾವು

Published 23 ಮೇ 2024, 13:44 IST
Last Updated 23 ಮೇ 2024, 13:44 IST
ಅಕ್ಷರ ಗಾತ್ರ

ಯಲ್ಲಾಪುರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಬಾಳಗಿಮನೆ ಶಾಲೆ ಸಮೀಪ ಗುರುವಾರ ವಾಹನವೊಂದು ಚಲಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ ಸವಾರ ಮೃತಪಟ್ಟಿದ್ದಾನೆ.

ಸಬಗೇರಿಯ ರಾಘು ದಿನೇಶ ಮಿರಾಶಿ (25) ಮೃತರು.

ಬೈಕ್‌ ನಾರಾಯಣಪುರದಿಂದ ಲಿಂಗದಬೈಲಿಗೆ ಪ್ರಯಾಣಿಸುತ್ತಿತ್ತು. ಹಿಂದಿನಿಂದ ಬಂದ ಲಾರಿ ಓವರ್‌ ಟೇಕ್‌ ಮಾಡುವ ಬರದಲ್ಲಿ ಬೈಕಿನ ಹ್ಯಾಂಡಲ್‌ ಗೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ. ಘಟನಾ ಸ್ಥಳದಿಂದ ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ಬೈಕ್‌ ಸಹ ಸವಾರ ವೆಂಕಟ್ರಮಣ ಗೋಪಾಲ ಸಿದ್ದಿ ಯಲ್ಲಾಪುರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT