ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಪ್ರತಿಮೆ ಅನಾವರಣ: ಶ್ಲಾಘನೆ

ಶಾಸಕ ಆರ್ ವಿ ದೇಶಪಾಂಡೆ ಸನ್ಮಾನ
Published 3 ಮಾರ್ಚ್ 2024, 12:43 IST
Last Updated 3 ಮಾರ್ಚ್ 2024, 12:43 IST
ಅಕ್ಷರ ಗಾತ್ರ

ದಾಂಡೇಲಿ: ನಗರದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮೂರ್ತಿ ಪ್ರತಿಷ್ಠಾಪನೆಗೆ ಶ್ರಮಿಸಿದ ಶಾಸಕ ಆರ್‌.ವಿ.ದೇಶಪಾಂಡೆ ಅವರನ್ನು ಆದಿ ಜಾಂಬವಂತ ಸಂಘಟನೆ ಹಾಗೂ ಮಹಾ ನಾಯಕ ಡಾ.ಬಿ ಆರ್ ಅಂಬೇಡ್ಕರ್ ಸೈನ್ಯ ವತಿಯಿಂದ ಶಾಸಕ ಆರ್.ವಿ.ದೇಶಪಾಂಡೆ ಅವರನ್ನು ಭಾನುವಾರ ಸನ್ಮಾನಿಸಲಾಯಿತು.

ಆದಿ ಜಾಂಬವಂತ ಸಂಘಟನೆ ಅಧ್ಯಕ್ಷ ಚಂದ್ರಕಾಂತ ನಡಿಗೇರ ಮಾತನಾಡಿ, ನಗರದ ಹಲವಾರು ಸಂಘಟನೆ ಹಾಗೂ ಜನರ ಹೋರಾಟ ಮಾಡಿದ ಫಲವಾಗಿ ಈಗ ದಾಂಡೇಲಿಯಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 11 ಅಡಿ ಎತ್ತರದ ಕಂಚಿನ ಮೂರ್ತಿಯನ್ನು ಸ್ಥಾಪಿಸಿ, ಅನಾವರಣಗೊಂಡಿದೆ. ಇದಕ್ಕೆ ಕಾರಣರಾದ ಶಾಸಕರನ್ನು ಗೌರವಿಸಲು ಹೆಮ್ಮೆ ಎನ್ನಿಸುತ್ತಿದೆ ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಮತ್ತು ನಗರಸಭೆ ಎಫ್.ಡಿ.ಎ. ಮೈಕಲ್ ಫೆರ್ನಾಂಡಿಸ್ ಹಾಗೂ ಪ್ರತಿಷ್ಠಾಪನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಸಂಘಟನೆಯ ಪ್ರಮುಖರಾದ ಅನಿಲ ಕಾಂಬ್ಳೆ, ಸುರೇಶ ಕೇದಾರಿ, ಹನುಮಂತ ಹರಿಜನ, ದ್ಯಾಮಣ್ಣ ಹರಿಜನ, ದತ್ತು ಮಾಳಿಗೆ, ಸತೀಶ್ ಚೌವ್ಹಾಣ್, ಸರಸ್ವತಿ ಚೌವ್ಹಾಣ, ನಿತ್ಯ ಕಾಂಬಳೆ, ಸದಾಶಿವ ಕಾಂಬಳೆ, ಕವಿತಾ ಕಾಂಬ್ಳೆ, ಶಿವಾಜಿ ಕಾಂಬಳೆ, ರೇಣುಕಾ ಮಾದರ, ಶಕೀಲಾ ಬಾನು ಸವನೂರು, ಹುಸೇನ್ ಬಿಯ ಸವಣೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT