ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಅಗ್ನಿ ದುರಂತ: ಫ್ಲೆಕ್ಸ್ ಅಂಗಡಿ ನಾಶ

Published 8 ಏಪ್ರಿಲ್ 2024, 13:00 IST
Last Updated 8 ಏಪ್ರಿಲ್ 2024, 13:00 IST
ಅಕ್ಷರ ಗಾತ್ರ

ಶಿರಸಿ: ವಿದ್ಯುತ್ ಶಾರ್ಟ್ ಸರ್ಕಿಟ್‍‍ನಿಂದ ಸಂಭವಿಸಿದ ಅಗ್ನಿ ದುರಂತದಲ್ಲಿ ನಗರದ ಫ್ಲೆಕ್ಸ್ ತಯಾರಿಕಾ ಅಂಗಡಿ ಸುಟ್ಟು ಕರಕಲಾದ ಘಟನೆ ಸೋಮವಾರ ನಡೆದಿದೆ. 

ಇಲ್ಲಿನ ಚಿಲುಮೆಕೆರೆ ಬಳಿ ಸೀತಾರಾಮ ಎಂಬುವವರಿಗೆ ಸೇರಿದ್ದ ಕನ್ನಿಕಾ  ಫ್ಲೆಕ್ಸ್ ಅಗ್ನಿಗೆ ಆಹುತಿಯಾದ ಅಂಗಡಿ. ಘಟನೆಯಲ್ಲಿ ಡಿಜಿಟಲ್ ಫ್ಲೆಕ್ಸ್ ತಯಾರಿಸುವ ಯಂತ್ರ, ಫೈಬರ್ ಪ್ರಿಂಟ್ ಯಂತ್ರ, ದಾಸ್ತಾನಿಟ್ಟ ಕಚ್ಚಾವಸ್ತುಗಳು, ಮರದ ಉಪಕರಣಗಳು ಸೇರಿ ಅಂಗಡಿಯಲ್ಲಿದ್ದ ಎಲ್ಲ ವಸ್ತುಗಳು ಬೆಂಕಿಗೆ ಹಾನಿಯಾಗಿವೆ. ಬೆಂಕಿ ಆವರಿಸುತ್ತಿದ್ದಂತೆ ಸ್ಥಳೀಯರು, ಅಗ್ನಿ ಶಾಮಕ ದಳದ ಸಿಬ್ಬಂದಿ ಆರಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ. ಅದಾಗಲೇ ಅಂದಾಜು ₹40 ಲಕ್ಷಕ್ಕೂ ಹೆಚ್ಚಿನ ಹಾನಿ ಸಂಭವಿಸಿತ್ತು. ಸ್ಥಳಕ್ಕೆ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಹಾನಿಯ ವಿವರ ಪಡೆದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT