ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣ ಕದ್ದುಮುಚ್ಚಿ ಮಾಡಿಲ್ಲ: ಶಾಸಕ ಶಿವರಾಮ ಹೆಬ್ಬಾರ

Published 16 ಮಾರ್ಚ್ 2024, 13:59 IST
Last Updated 16 ಮಾರ್ಚ್ 2024, 13:59 IST
ಅಕ್ಷರ ಗಾತ್ರ

ಮುಂಡಗೋಡ: ‘ರಾಜಕಾರಣವನ್ನು ಕದ್ದು ಮುಚ್ಚಿ ಮಾಡಲು ಆಗುವುದಿಲ್ಲ. ರಾಜಕಾರಣವನ್ನು ನೇರವಾಗಿಯೇ ಮಾಡುತ್ತೇನೆ.  ಏನು ಮಾಡುವುದಾದರೂ ಹೇಳಿಯೇ ಮಾಡುತ್ತೇನೆ. ಏನನ್ನು ಹೇಳುತ್ತೇನೆ ಅದನ್ನೇ ಮಾಡಿ ತೋರಿಸುತ್ತೇನೆ’ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ತಾಲ್ಲೂಕಿನ ಟಿಬೆಟನ್‌ ಕ್ಯಾಂಪ್‌ ಸಮೀಪ ಯಲ್ಲಾಪುರ-ಮುಂಡಗೋಡ ರಾಜ್ಯ ಹೆದ್ದಾರಿಯಲ್ಲಿ ₹1.40 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಟಿಬೆಟನ್‌ ಕ್ಯಾಂಪ್‌ನ ಗೋಶಾಲೆಯ ಸಮೀಪ ಇಕ್ಕಟ್ಟಾದ ತಿರುವಿನಿಂದ ರಾಜ್ಯ ಹೆದ್ದಾರಿ ಕೂಡಿದ್ದು, ಸೇತುವೆ ನಿರ್ಮಾಣದ ಅಗತ್ಯವಿತ್ತು. ಹೀಗಾಗಿ ಹೊಸ ಸೇತುವೆ ನಿರ್ಮಾಣದೊಂದಿಗೆ ಅಗಲವಾದ ರಸ್ತೆ ಮಾಡಲು ಅಡಿಗಲ್ಲು ಹಾಕಲಾಗಿದೆ’ ಎಂದು ಹೇಳಿದರು.

ರವಿಗೌಡ ಪಾಟೀಲ, ಗುಡ್ಡಪ್ಪ ಕಾತೂರ, ಮಂಜುನಾಥ ಕಟಗಿ, ಸಿದ್ದಪ್ಪ ಹಡಪದ, ರಾಜು ಗುಬ್ಬಕ್ಕನವರ, ಶೇಖರ ಲಮಾಣಿ, ಪ್ರಸನ್ನ ಲಮಾಣಿ, ಫಣಿರಾಜ ಹದಳಗಿ, ದೇವು ಪಾಟೀಲ, ಲೋಕೋಪಯೋಗಿ ಎಇಇ ಮಹದೇವಪ್ಪ ಹ್ಯಾಟಿ, ಗುತ್ತಿಗೆದಾರ ಆರ್.ಎಸ್.ಸಜ್ಜನಶೆಟ್ಟರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT