ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಅಪಘಾತ: ಐವರ ಸಾವು

Published 8 ಡಿಸೆಂಬರ್ 2023, 16:40 IST
Last Updated 8 ಡಿಸೆಂಬರ್ 2023, 16:40 IST
ಅಕ್ಷರ ಗಾತ್ರ

ಶಿರಸಿ (ಉತ್ತರ ಕನ್ನಡ ಜಿಲ್ಲೆ): ಮದುವೆ ಸಮಾರಂಭಕ್ಕೆ ಹೊರಟಿದ್ದ ಒಂದೇ ಕುಟುಂಬದ ಐವರು ಶುಕ್ರವಾರ ತಾಲ್ಲೂಕಿನ ಬಂಡಲ ಬಳಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಮತ್ತು ಕಾರು ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

‘ಕಾರಿನಲ್ಲಿದ್ದ ಮಂಗಳೂರು ಸಮೀಪದ ಕಿನ್ನಿ ಕಂಬಳದ ನಿವಾಸಿಗಳಾದ ರಾಮಕೃಷ್ಣ ಬಾಬು ರಾವ್ (71), ವಿದ್ಯಾಲಕ್ಷ್ಮಿ ರಾಮಕೃಷ್ಣ ರಾವ್( 67), ಪುಷ್ಪಾ ಮೋಹನ್ ರಾವ್ (62), ಸುಹಾಸ್ ಗಣೇಶ್ ರಾವ್ (30) ಮತ್ತು ಅರವಿಂದ (35) ಮೃತರು’ ಎಂದು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಬಸ್ ಶಿರಸಿಯಿಂದ ಕುಮಟಾದತ್ತ ಹೋಗುತ್ತಿತ್ತು ಮತ್ತು ಕಾರು ಕುಮಟಾದಿಂದ ಶಿರಸಿಯತ್ತ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಾಮಕೃಷ್ಣ ಬಾಬು ರಾವ್ ಕುಟುಂಬದವರು ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಬೇಕಿತ್ತು. ಬಸ್‌ನಲ್ಲಿ 60ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT