ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | 14 ಜನರ ವಿರುದ್ಧ ಪ್ರಕರಣ ದಾಖಲು

Published 10 ಜನವರಿ 2024, 16:28 IST
Last Updated 10 ಜನವರಿ 2024, 16:28 IST
ಅಕ್ಷರ ಗಾತ್ರ

ಶಿರಸಿ (ಉತ್ತರ ಕನ್ನಡ ಜಿಲ್ಲೆ): ನಕಲಿ ಅಂಕಪಟ್ಟಿ ನೀಡಿ ಗ್ರಾಮೀಣ ಅಂಚೆ ಸೇವಕ ಹುದ್ದೆ ಪಡೆದ ಆರೋಪದ ಮೇಲೆ 14 ಜನರ ವಿರುದ್ಧ ಇಲ್ಲಿನ ಅಂಚೆ ಅಧಿಕಾರಿಗಳು ಬುಧವಾರ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಯಾದಗಿರಿಯ ಮೋಹನ ರುಕ್ಯಾ ನಾಯಕ, ಬೆಳಗಾವಿಯ ಹನುಮಂತ ಭೀಮಪ್ಪಾ ಮದಿಹಳ್ಳಿ, ವಿಠಲ ಬಸಪ್ಪ ಹೊಸೂರ, ದುಂಡಪ್ಪ ರಾಮಪ್ಪ ಆಶಿರೋಟಿ, ರವಿ ಮಹಾದೇವಪ್ಪ ದಡ್ಡಿ, ಕಲಬುರಗಿಯ ಶರಣ್ ಕುಮಾರ್ ಮೋತಿಲಾಲ್  ಚಂದಾಪುರ, ವಿಜಯಪುರದ ಸುರೇಶ ಶಿವಪ್ಪ ಕುಡಗಿ, ಸಚಿನ ಮಾರುತಿ ಭಜಂತ್ರಿ, ಮಮಿತಾ ಬಾಬು ರಾಥೋಡ್, ಮೋಹನ್ ನಾಮದೇವ  ಚವಾಣ್, ದಿಲೀಪ್ ಧನಸಿಂಗ್ ಪವಾರ, ಸತೀಶ ಮೋತಿಲಾಲ್ ಪವಾರ, ಆಕಾಶ್ ಶ್ರೀನಿವಾಸ ಭಜಂತ್ರಿ ಹಾಗೂ ಬಾಗಲಕೋಟೆಯ ಅಮೃತಾ ಅರವಿಂದಬಾಬು ನಾಯಕ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ಅಂಚೆ ನಿರೀಕ್ಷಕ ಮಂಜುನಾಥ ದೊಡ್ಮನಿ ನೀಡಿದ ದೂರು ಆಧರಿಸಿ ಆರೋಪಿಗಳ ಬಂಧನಕ್ಕೆ ಹೊಸ ಮಾರುಕಟ್ಟೆ ಠಾಣೆಯ ಪಿಎಸ್‌ಐ ರತ್ನಾ ಕುರಿ ಅವರು ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT