ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾವಿ ತೋಡಲು ಎದುರಾಗಿದ್ದ ಅಡ್ಡಿ ನಿವಾರಣೆ: ಮತ್ತೆ ಬಾವಿಗಿಳಿದ ಗೌರಿ!

Published 21 ಫೆಬ್ರುವರಿ 2024, 12:44 IST
Last Updated 21 ಫೆಬ್ರುವರಿ 2024, 12:44 IST
ಅಕ್ಷರ ಗಾತ್ರ

ಶಿರಸಿ (ಉತ್ತರ ಕನ್ನಡ ಜಿಲ್ಲೆ) : ಇಲ್ಲಿನ ಗಣೇಶನಗರದ ಅಂಗನವಾಡಿ ಕೇಂದ್ರ 6ರ ಬಳಿ ಗೌರಿ ನಾಯ್ಕ ಎಂಬುವರಿಗೆ ಬಾವಿ ತೋಡಲು ಎದುರಾಗಿದ್ದ ಅಡ್ಡಿ ಸಂಸದ ಅನಂತಕುಮಾರ ಹೆಗಡೆ ಅವರ ಮಧ್ಯಸ್ಥಿಕೆಯಿಂದ ನಿವಾರಣೆಯಾಗಿದೆ.

ಬಾವಿ ತೋಡಲು ಅವಕಾಶ ನೀಡದೆ ಬಂದ್ ಮಾಡಿದ್ದ ಅಧಿಕಾರಿಗಳ ನಡೆ ಖಂಡಿಸಿ ಬುಧವಾರ ಗ್ರಾಮಸ್ಥರು ಗೌರಿ ನಾಯ್ಕ ಜೊತೆ ಉಪವಿಭಾಗಾಧಿಕಾರಿ, ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಬಾವಿ ಇರುವ ಸ್ಥಳಕ್ಕೆ ಬಂದ ಸಂಸದ ಅನಂತಕುಮಾರ ಹೆಗಡೆ ಅವರು, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಜತೆ ದೂರವಾಣಿಯಲ್ಲಿ ಮಾತನಾಡಿ, ‘ಮಾನವೀಯ ನೆಲೆಗಟ್ಟಿನಲ್ಲಿ ಅವಕಾಶ ಕಲ್ಪಿಸಿ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಗೌರಿ ನಾಯ್ಕ ಸ್ವತಃ ಬಾವಿ ತೋಡಲು ಅವಕಾಶ ನೀಡಿ, ಸದ್ಯ ಬಂದ್ ಇರುವ ಬಾವಿಯ ಬಾಗಿಲು ತೆರೆಯಲು ಸೂಚಿಸುವೆ’ ಎಂದರು. 

ತಕ್ಷಣ ಗೌರಿ ನಾಯ್ಕ ಅವರಿಗೆ ದೂರವಾಣಿ ಕರೆ ಹೆಗಡೆ, ‘ಬಾವಿ ತೋಡಲು ಅವಕಾಶ ಸಿಕ್ಕಿದೆ. ಬಾವಿ ಕಾಮಗಾರಿ ಮುಂದುವರೆಸಿ’ ಎಂದರು. ತಕ್ಷಣವೇ ಸ್ಥಳಕ್ಕೆ ಬಂದ ಗೌರಿ ನಾಯ್ಕ ಬಾವಿ ತೋಡುವ ಕಾರ್ಯ ಮುಂದುವರೆಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT