ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಶ್ರೇಷ್ಠ ಪಶುವೈದ್ಯ ಪ್ರಶಸ್ತಿಗೆ ಡಾ.ಪಿ.ಎಸ್. ಹೆಗಡೆ ಆಯ್ಕೆ

Published 26 ಏಪ್ರಿಲ್ 2024, 13:14 IST
Last Updated 26 ಏಪ್ರಿಲ್ 2024, 13:14 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿಯ ಪಶುವೈದ್ಯ ಡಾ.ಪಿ.ಎಸ್.ಹೆಗಡೆ ರಾಜ್ಯಮಟ್ಟದ ಶ್ರೇಷ್ಠ ಪಶುವೈದ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕ ಪಶುವೈದ್ಯಕೀಯ ಪರಿಷತ್, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಶು ವೈದ್ಯಕೀಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿರುವ, ನೀಡುತ್ತಿರುವ 34 ಪಶುವೈದ್ಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿದ್ದು, ಏ.27ರಂದು ವಿಶ್ವ ಪಶು ವೈದ್ಯಕೀಯ ದಿನಾಚರಣೆಯ ದಿನ ಬೆಂಗಳೂರಿನ ಪಶು ವೈದ್ಯ ಪರಿಷತ್ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ನೆರವೇರಲಿದೆ.

ಟಿಎಸ್‌ಎಸ್ ಸಮರ್ಪಣದ ವೈದ್ಯರಾದ ಡಾ.ಪಿ.ಎಸ್.ಹೆಗಡೆ 2024ರ ಶ್ರೇಷ್ಠ ಪಶುವೈದ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಳೆದ 35 ವರ್ಷಗಳಿಂದ ಜಿಲ್ಲೆಯ ಪಶು ವೈದ್ಯಕೀಯ ಕ್ಷೇತ್ರಕ್ಕೆ ಹಲವಾರು ಸಾಧ್ಯತೆಗಳನ್ನು ಪರಿಚಯಿಸಿದ್ದಾರೆ. ಇದೇ ಮೊದಲ ಬಾರಿಗೆ ಕರ್ನಾಟಕ ಪಶು ವೈದ್ಯಕೀಯ ಪರಿಷತ್ ಯಾವುದೇ ಅರ್ಜಿ ಸ್ವೀಕರಿಸದೇ, ಕೊಡುಗೆ ನೀಡಿದವರನ್ನು ಗುರುತಿಸಿ, ಸನ್ಮಾನಿಸುವ ಮಹತ್ಕಾರ್ಯ ನಡೆಸಿದ್ದು ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT