ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ | ಧರೆಗುರುಳಿದ ಬಸರಿ ಮರ: ಅಂಗಡಿ, ಬೈಕ್‌ಗಳು ಜಖಂ

Published 8 ಏಪ್ರಿಲ್ 2024, 13:14 IST
Last Updated 8 ಏಪ್ರಿಲ್ 2024, 13:14 IST
ಅಕ್ಷರ ಗಾತ್ರ

ಮುಂಡಗೋಡ: ಇಲ್ಲಿನ ಬಂಕಾಪುರ ರಸ್ತೆಯ ಪಿ.ಎಲ್‌.ಡಿ ಬ್ಯಾಂಕ್‌ ಆವರಣದಲ್ಲಿರುವ ಸುಮಾರು 80-90 ವರ್ಷ ಹಳೆಯದಾದ ಬೃಹತ್‌ ಬಸರಿ ಮರವೊಂದು, ಸೋಮವಾರ ಏಕಾಏಕಿ ಉರುಳಿ ಬಿದ್ದ ಪರಿಣಾಮ, ಎರಡು ಅಂಗಡಿ ಹಾಗೂ ಬೈಕ್‌ಗಳು ಜಖಂಗೊಂಡಿವೆ.

ಮರದ ಅಡಿಯಲ್ಲಿದ್ದ ಗ್ಯಾರೇಜ್‌ನಲ್ಲಿ ನಾಲ್ಕೈದು ಜನ ಗ್ರಾಹಕರು ಈ ಸಮಯದಲ್ಲಿದ್ದರು, ಅವರಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ʼಮಧ್ಯಾಹ್ನ ವೇಳೆ ಗಾಳಿ, ಮಳೆ ಇಲ್ಲದಿದ್ದರೂ ಏಕಾಏಕಿ ಬೃಹತ್‌ ಮರ ಗ್ಯಾರೇಜ್‌ ಮೇಲೆ ಉರುಳಿ ಬಿದ್ದಿತು. ಗ್ಯಾರೇಜ್‌ನಲ್ಲಿ ಕುಳಿತಿದ್ದವರು ಹೊರಬರಲು ಆಗದೇ ಅಲ್ಲಿಯೇ ಕುಳಿತುಕೊಂಡರು. ನಾಲ್ಕೈದು ಬೈಕ್‌ಗಳ ಮೇಲೆ ಮರದ ಟೊಂಗೆಗಳು ಬಿದ್ದು, ಬೈಕ್‌ಗಳು ಜಖಂಗೊಂಡಿವೆ. ಗ್ಯಾರೇಜ್‌ ಮೇಲೂ ಮರ ಬಿದ್ದಿರುವುದರಿಂದ, ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಪಕ್ಕದಲ್ಲಿರುವ ವೆಲ್ಡಿಂಗ್‌ ಅಂಗಡಿಯ ಮೇಲೂ ಮರದ ಟೊಂಗೆಗಳು ಮುರಿದು ಬಿದ್ದಿರುವುದರಿಂದ, ಅಲ್ಲಿಯೂ ಹಾನಿಯಾಗಿದೆ’ ಎಂದು ಗ್ಯಾರೇಜ್‌ ಮಾಲೀಕ ಪ್ರಮೋದ ಕಡಗೋಡ ಹೇಳಿದರು.

ʼಈಗಾಗಲೇ ಮರವನ್ನು ಕಟಾವುಗೊಳಿಸಲು ಅನುಮತಿ ಕೋರಿ ಬ್ಯಾಂಕ್‌ನವರು ಅರ್ಜಿ ನೀಡಿದ್ದರು. ಮರವು ತಳಭಾಗದಲ್ಲಿ ಸಡಿಲಗೊಂಡು, ಮೂರು ಭಾಗಗಳಾಗಿ ಕತ್ತರಿಸಿಕೊಂಡು ಉರುಳಿ ಬಿದ್ದಿದೆʼ ಎಂದು ಉಪವಲಯ ಅರಣ್ಯಾಧಿಕಾರಿ ಅರುಣ ಕಾಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT