ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳ: ತಂದೆಯ ಕನಸು ಮಗಳಿಂದ ಸಾಕಾರ

Published 24 ಫೆಬ್ರುವರಿ 2024, 15:39 IST
Last Updated 24 ಫೆಬ್ರುವರಿ 2024, 15:39 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಮುದ್ದೇಬಿಹಾಳ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಎಂ. ಗುಡದಿನ್ನಿ ಅವರ ಪುತ್ರಿ ಐಶ್ವರ್ಯಾ ಗುಡದಿನ್ನಿ ಹೈಕೋರ್ಟ್‌ನ ಸಿವಿಲ್‌ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ತಂದೆಯ ಕನಸನ್ನು ನನಸು ಮಾಡಿದ್ದಾರೆ.

2023ರ ನವೆಂಬರ್‌ನಲ್ಲಿ ನಡೆದ ಪರೀಕ್ಷೆ ಅಂತಿಮ ಆಯ್ಕೆ ಪಟ್ಟಿಯನ್ನು ಶುಕ್ರವಾರ ಹೈಕೋರ್ಟ್‌ ಬಿಡುಗಡೆ ಮಾಡಿದೆ.
ಐಶ್ವರ್ಯಾ ಅವರು 2019 ರಲ್ಲಿ ಬೆಳಗಾವಿ ಆರ್.ಎಲ್ ಲಾ ಕಾಲೇಜಿನಲ್ಲಿ, ನಂತರ ಬೆಂಗಳೂರಿನ ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ಎಲ್.ಎಲ್.ಎಂ ಅಧ್ಯಯನ ಮಾಡಿದ್ದರು. 2023ರಿಂದ ವಕೀಲರಾಗಿ ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲಿ ಅಭ್ಯಾಸ ನಡೆಸಿದ್ದರು.

ಇವರು ಯೋಗ ಶಿಕ್ಷಕಿ ಪ್ರೇಮಾ ಹಾಗೂ ವಕೀಲರಾದ ಎಸ್.ಎಂ. ಗುಡದಿನ್ನಿ ಅವರ ಪುತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT