ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುದ್ದೇಬಿಹಾಳ: ನದಾಫ/ಪಿಂಜಾರ ಸಮುದಾಯ ಭವನಕ್ಕೆ ₹20 ಲಕ್ಷ ಅನುದಾನ

ನದಾಫ/ಪಿಂಜಾರ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ
Published 11 ಮಾರ್ಚ್ 2024, 16:20 IST
Last Updated 11 ಮಾರ್ಚ್ 2024, 16:20 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ನದಾಫ /ಪಿಂಜಾರ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ₹20 ಲಕ್ಷ ಅನುದಾನ ಸರಕಾರದಿಂದ ಒದಗಿಸುವುದಾಗಿ ಕೆಎಸ್‌ಡಿಎಲ್ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ ಅಪ್ಪಾಜಿ ಭರವಸೆ ನೀಡಿದರು.

ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಟಾಪ್ ಇನ್ ಟೌನ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ನದಾಫ/ಪಿಂಜಾರ ಸಂಘದ ತಾಲ್ಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು

ನದಾಫ/ಪಿಂಜಾರ ಸಮುದಾಯದವರು ಒಗ್ಗೂಡಬೇಕು. ತಮ್ಮ ಹಕ್ಕುಗಳಿಗಾಗಿ ಸಂಘಟನೆ ಅವಶ್ಯಕತೆ ಇದೆ ಎಂಬುದನ್ನು ಮನಗಂಡು ತಾಲ್ಲೂಕುಮಟ್ಟದ ಕಾರ್ಯಕ್ರಮ ನಡೆಸಿರುವುದು ಶ್ಲಾಘನೀಯ ಸಂಗತಿ ಎಂದರು.

ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ್(ಕುದರಿಸಾಲವಾಡಗಿ) ಮಾತನಾಡಿ. ಸಮಾಜದಲ್ಲಿ ಎಲ್ಲಾ ಸಮಾಜದೂಂದಿಗೆ ಸಹೋದರತೆ,ಭಾವೈಕ್ಯತೆಯಿಂದ ಇರುವ ಸಮಾಜ ನದಾಫ,ಪಿಂಜಾರ ಸಮಾಜವಾಗಿದೆ ಎಂದರು.

ನದಾಫ ಸಮಾಜದ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷೆ ರಿಯಾನಾಬಾನು ನದಾಫ ಮಾತನಾಡಿದರು. ಪ್ರಾಸ್ತಾವಿಕವಾಗಿ ಸಹಾಯಕ ಪ್ರಾಧ್ಯಾಪಕ ಎಚ್.ಎ.ಕಟಗೂರ ಮಾತನಾಡಿದರು.

ಟಿ.ಎನ್ ರೂಢಗಿ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸಾನಿಧ್ಯವನ್ನು ಹಿರೂರು ಅನ್ನದಾನೇಶ್ವರ ಮಠದ ಜಯಸಿದ್ದೇಶ್ವರ ಶಿವಾಚಾರ್ಯರು ವಹಿಸಿದ್ದರು.ಮೌಲಾನಾ ಮಹ್ಮದರಫೀಕ್ ನದಾಫ ಕುರಾಣ ಪಠಣ ಮಾಡಿದರು. ಮುಖಂಡರಾದ ಎಂ.ಕೆ.ನದಾಫ ವಕೀಲರು,ಬಿ.ಬಿ.ಪಿಂಜಾರ,ಅಬ್ದುಲಗಫೂರ ಮಕಾನದಾರ,ಎಲ್.ಎನ್.ನದಾಫ, ಮಹಿಬೂಬ ಮುಲ್ಲಾ, ಲಾಳೇಸಾ ನದಾಫ,ಮಹ್ಮದಹುಸೇನ ಮಾದಿನಾಳ, ಲಾಡ್ಲೇಮಶ್ಯಾಕ್ ನದಾಫ ಇದ್ದರು.

ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು.ಟಿ.ಎನ್ ರೂಢಗಿ ಸ್ವಾಗತಿಸಿದರು. ಬಾಬು ದಿಡ್ಡಿಮನಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT