ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಮಹಾಮೇರು ನಾಯಕ ಅಂಬೇಡ್ಕರ್

ವಿಜಯಪುರ ಜಿಲ್ಲಾ ಕಾಂಗ್ರೆಸ್‌‌ ಸಮಿತಿ ಅಧ್ಯಕ್ಷ ಪ್ರೊ. ರಾಜು ಅಲಗೂರ ಅಭಿಮತ
Last Updated 14 ಏಪ್ರಿಲ್ 2021, 10:59 IST
ಅಕ್ಷರ ಗಾತ್ರ

ವಿಜಯಪುರ:ಡಾ.ಬಿ.ಆರ್‌. ಅಂಬೇಡ್ಕರ್ ಅವರು‌ ದಲಿತ ಸಮಾಜಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅವರು ಸಮಸ್ತ ಭಾರತೀಯರಿಗೆ ನ್ಯಾಯ ಒದಗಿಸಿಕೊಟ್ಟಈ ದೇಶದ ಮಹಾಮೇರು ನಾಯಕ ಎಂದುಜಿಲ್ಲಾ ಕಾಂಗ್ರೆಸ್‌‌ ಸಮಿತಿ ಅಧ್ಯಕ್ಷ ಪ್ರೊ. ರಾಜು ಅಲಗೂರ ಹೇಳಿದರು.

ಜಿಲ್ಲಾ ಕಾಂಗ್ರೆಸ್‌‌ ಸಮಿತಿ ವತಿಯಿಂದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 130ನೇ ಜಯಂತಿಯಲ್ಲಿ ಅವರು ಮಾತನಾಡಿದರು.

ಈ ದೇಶಕ್ಕೆ ಪವಿತ್ರವಾದ ಸಂವಿಧಾನ ನೀಡಿ ಪ್ರಜಾಪ್ರಭುತ್ವ ದೇಶವನ್ನು ಕಟ್ಟುವಲ್ಲಿಅಂಬೇಡ್ಕರ್ ಮುಖ್ಯ ಪಾತ್ರವಹಿಸಿದ್ದರು.ಬಡವರಿಗೆ, ದಲಿತರಿಗೆ ಹಾಗೂ ಕೆಳವರ್ಗದ ಜನರ ಅವರು ಆಶಾಕಿರಣವಾಗಿದ್ದರು ಎಂದರು.

ಪುರುಷ ಪ್ರಧಾನ ಸಮಾಜದ ಕಾಲದಲ್ಲಿ ಮಹಿಳೆಯರಿಗೆ ಸಂವಿಧಾನದಲ್ಲಿ ಸಮಾನವಾದ ಹಕ್ಕು ನೀಡಿ ಅವರು ಸಶಕ್ತರರಾಗಿ ಬೆಳೆಯಲು ಕಾರಣಿಭೂತರಾದಂತಹ ಮಹಾನ್‌ ನಾಯಕರಾಗಿದ್ದಾರೆ. ಈ ನಿಟ್ಟಿನಲ್ಲಿ ನಾವು ಅವರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಂಡು ಅವರ ಹೋರಾಟವನ್ನು ಸದಾ ಜಾರಿಯಲ್ಲಿಟ್ಟು ಮುಂದಿನ ಪೀಳಿಗೆಗೆ ತಿಳಿಹೇಳುವ ಕೆಲಸ ಮಾಡೋಣ ಎಂದು ಹೇಳಿದರು.

ಮಾಜಿ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಅಂಬೇಡ್ಕರ್‌ ಅವರ ತ್ಯಾಗ, ಬಲಿದಾನ, ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರು ಹಾಕಿ ಕೊಟ್ಟ ದಾರಿಯಲ್ಲಿ ಸಾಗಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು.

ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಕೆ.ಎಫ್.ಅಂಕಲಗಿ,ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಮಹ್ಮದ್‌ ರಫೀಕ್‌ ಟಪಾಲ, ಐ.ಎಂ.ಇಂಡೀಕರ, ವಿದ್ಯಾವತಿ ಅಂಕಲಗಿ, ವಿಜಯಕುಮಾರ ಘಾಟಗೆ, ಅಬ್ದುಲ್‌ ಖಾದರ್‌ ಖಾದೀಮ, ಚಾಂದಸಾಬ್‌ ಗಡಗಲಾವ, ಶಬ್ಬೀರ್‌ ಜಾಗೀರದಾರ, ಎಸ್‌.ಎಂ.ಪಾಟೀಲ(ಗಣಿಹಾರ), ಪೀರಪ್ಪ ನಡುವಿನಮನಿ, ಜಮೀರ್‌ ಬಕ್ಷೀ ಉಪಸ್ಥಿತರಿದ್ದರು.

***

ಈ ದೇಶದ ಕಟ್ಟ ಕಡೆಯ ಪ್ರಜೆಯು ಸಮಾನವಾಗಿ ಜೀವನ ನಡೆಸಲೆಂದು ಸಂವಿಧಾನದಲ್ಲಿ ಅಧಿಕಾರ ನೀಡಿ ಸಮಾನತೆಯ ದೀಕ್ಷೆ ಕೊಟ್ಟಿರುವಂತಹ ಮಹಾನ್‌ ನಾಯಕಅಂಬೇಡ್ಕರ್‌
ವಿಠ್ಠಲ ಕಟಕದೊಂಡ
ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT