ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಹಾರ: ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಹೆದ್ದಾರಿ ತಡೆ

Published 24 ಜನವರಿ 2024, 12:52 IST
Last Updated 24 ಜನವರಿ 2024, 12:52 IST
ಅಕ್ಷರ ಗಾತ್ರ

ಕೊಲ್ಹಾರ: ತಾಲ್ಲೂಕಿನ ಮಟ್ಟಿಹಾಳ ಗ್ರಾಮದಲ್ಲಿರುವ ಕೃಷ್ಣಾ ಭಾಗ್ಯ ಜಲನಿಗಮದ ಕಾರ್ಯಾಲಯಗಳ ಮುಂದೆ ಮುಳವಾಡ ಏತ ನೀರಾವರಿಯ ಯೋಜನೆಯ ಮೂಲಕ ಪಶ್ಚಿಮ ಮತ್ತು ಪೂರ್ವ ಕಾಲುವೆಗಳಿಗೆ ತಕ್ಷಣವೇ ನೀರು ಹರಿಸಬೇಕು ಎಂದು ಆಗ್ರಹಿಸಿ ಬಿಜೆಪಿ, ರೈತ ಸಂಘಟನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಂಗಳವಾರ ಧರಣಿ ನಡೆಸಿದರು.

ಮಟ್ಟಿಹಾಳ ವೃತ್ತದಲ್ಲಿ ನೂರಾರು ರೈತರು ಸೇರಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು. ನಾಲ್ಕು ತಾಸು ಹೆದ್ದಾರಿಯನ್ನು  ಪೂರ್ಣಪ್ರಮಾಣದಲ್ಲಿ ಬಂದ್‌ ಮಾಡಿ ವಾಹನಗಳು ಸಂಚರಿಸದಂತೆ ತಡೆಗಟ್ಟಿದ ಪ್ರತಿಭಟನಾಕಾರರು ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಕೊಲ್ಹಾರ ತಹಶೀಲ್ದಾರ್‌ ಎಸ್.ಎಸ್.ನಾಯ್ಕಲಮಠ, ಸಿಪಿಐ ಅಶೋಕ ಚವ್ಹಾಣ, ಪಿಎಸ್‍ಐ ಎಸ್‌.ಸಿ.ಗುರದಟ್ಟಿ, ಎಎಸ್‍ಐ ಎಚ್.ಎಸ್.ಗೌಡರ, ಎಸ್‌.ಇ. ಗೋವಿಂದ ರಾಠೋಡ ಭೇಟಿ ನೀಡಿ ರೈತರ ಮನವೊಲಿಸಿದರು.

ಬಿಜೆಪಿ ಮುಖಂಡ ತುಳಸಿಗೇರಿ ಹಗೇದಾಳ, ರೈತ ಮುಖಂಡರಾದ ಸೋಮು ಬಿರಾದಾರ. ಹಣಮಾಪೂರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಶ್ರೀಕಾಂತ ಗಣಿ, ಹಣಮಂತಗೌಡ ಬಿರಾದಾರ, ನಿಂಗನಗೌಡ ಪಾಟೀಲ, ಶ್ರೀಶೈಲ ಗಿಡ್ಡಪ್ಪಗೋಳ, ಅಪ್ಪಸಿ ಮಟ್ಯಾಳ, ಮುತ್ತು ಕೊಟಬಾಗಿ, ದಶರಥ ಈಟಿ, ಸಗರೆಪ್ಪ ಮುರನಾಳ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT