ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿ: ಹೊಸಮನಿ

Published 29 ನವೆಂಬರ್ 2023, 13:25 IST
Last Updated 29 ನವೆಂಬರ್ 2023, 13:25 IST
ಅಕ್ಷರ ಗಾತ್ರ

ಇಂಡಿ: ‘ವಿದ್ಯಾರ್ಥಿಗಳು ಪಠ್ಯ ಅಧ್ಯಯನದೊಂದಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು’ ಎಂದು ವಿಜಯಪುರ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಸಿ.ಕೆ.ಹೊಸಮನಿ ಹೇಳಿದರು.

ತಾಲ್ಲೂಕಿನ ಚವಡಿಹಾಳ ಗ್ರಾಮದ ಭಾಗ್ಯವಂತಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಇಲಾಖೆಯು ಏರ್ಪಡಿಸುವ ಸಾಂಸ್ಕೃತಿಕ ಚಟುವಟಕೆಯಂತಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಕಲೆ ಪ್ರದರ್ಶಿಸುವುದರೊಂದಿಗೆ ಸಾಧಕರಾಗಬೇಕು’ ಎಂದು ಹೇಳಿದರು.

ಶಾಖಾಧಿಕಾರಿ ಪ್ರಕಾಶ ಗೊಂಗಡಿ ಮಾತನಾಡಿದರು. ದುಂಡಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು, ಸಂಸ್ಥೆಯ ಅಧ್ಯಕ್ಷ ಶಾಂತಪ್ಪ ದಶವಂತ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶಗೌಡ ಬಿರಾದಾರ, ಸಂಸ್ಥೆಯ ಆಡಳಿತ ಮಂಡಳಿ ಪದಾಧಿಕಾರಿಗಳಾದ ಕಾಮಣ್ಣ ದಶವಂತ, ಶಿವಾನಂದ ದಶವಂತ, ನಾಗರಾಜ ದಶವಂತ, ಅಶೋಕ ದಶವಂತ, ಅಪ್ಪಾರಾಯ ದಶವಂತ, ಪದವಿ ಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಡಿ.ಹೆಬ್ಬಿ, ಪ್ರಾಚಾರ್ಯರಾದ ಕೆ.ಜಿ.ಲಮಾಣಿ, ಕೆ.ಎ.ಉಪ್ಪಾರ, ಎನ್.ಎಸ್.ತೆಗ್ಗಿಹಳ್ಳಿ, ಸಿ.ಕೆ.ಯಳಸಂಗಿ, ಎಂ.ಬಿ.ಖೇಡಗಿ, ಉಪನ್ಯಾಸಕ ಎಂ.ಬಿ.ರಜಪೂತ, ಆರ್.ಸಿ.ಹಿರೇಮಠ, ಚಂದ್ರಶೇಖರ ದಶವಂತ, ನಿವೃತ್ತ ಪ್ರಾಚಾರ್ಯ ಎನ್.ಆರ್.ಉಟಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT