ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋವಿಡ್ ಅಕ್ರಮ; ಯತ್ನಾಳ ಅವರನ್ನೂ ತನಿಖೆಗೊಳಪಡಿಸಿ: ಕೆಪಿಸಿಸಿ ವಕ್ತಾರ

Published 27 ಡಿಸೆಂಬರ್ 2023, 18:47 IST
Last Updated 27 ಡಿಸೆಂಬರ್ 2023, 18:47 IST
ಅಕ್ಷರ ಗಾತ್ರ

ವಿಜಯಪುರ: ‘ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕೋವಿಡ್ ಹೆಸರಿನಲ್ಲಿ₹40 ಸಾವಿರ ಕೋಟಿ ಅವ್ಯವಹಾರ ನಡೆದಿದೆ’ ಎಂದು ಆರೋಪಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ  ಅವರನ್ನು ಮೊದಲು ತನಿಖೆಗೊಳಪಡಿಸಬೇಕು. ಆಗ ಇನ್ನು ಹೆಚ್ಚಿ‌ನ ಸತ್ಯಾಂಶ ಹೊರಬೀಳಲಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು’ ಎಂದು ಕೆಪಿಸಿಸಿ ವಕ್ತಾರ ಎಸ್‌.ಎಂ.ಪಾಟೀಲ ಗಣಿಹಾರ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಅವ್ಯವಹಾರ ನಡೆಸಿದ ಸಮಯದಲ್ಲಿ ಯತ್ನಾಳ ಕೂಡ ಬಿಜೆಪಿ ಸರ್ಕಾರದ ಭಾಗವಾಗಿದ್ದರು, ಆಗ ಈ ಅವ್ಯವಹಾರದ ಬಗ್ಗೆ ಧ್ವನಿ ಏಕೆ ಎತ್ತಲಿಲ್ಲ? ಆಗ ನಿಮ್ಮ ಪಾಲು ಅದರಲ್ಲಿತ್ತೋ? ಅಥವಾ ಪಾಲು ಹಣ ಹಂಚಿಕೆಯಲ್ಲಿ ಧಕ್ಕೆಯಾಗಿದ್ದಕ್ಕೆ ಈ ರೀತಿ ಆರೋಪಿಸುತ್ತಿದ್ದೀರೋ’ ಎಂದು ಪ್ರಶ್ನಿಸಿದರು.

‘ಯತ್ನಾಳರ ಬಗ್ಗೆ ಜನರಿಗೆ ಗೌರವವಿದೆ. ಅವರ ಈ ಗೌರವ ಇನ್ನೂ ಹೆಚ್ಚಾಗಬೇಕಿದ್ದರೆ ಮೊದಲು ಚುನಾವಣೆಗೆ ಸ್ಪರ್ಧಿಸಿದಾಗ ಎಷ್ಟು ಪ್ರಮಾಣದ ಆಸ್ತಿ ಇತ್ತು? ಈಗ ಎಷ್ಟು ಪ್ರಮಾಣದ ಆಸ್ತಿ ಇದೆ? ಎಂದು ಜನರ ಮುಂದೆ ಬಿಚ್ಚಿಡಬೇಕು. ಚಿಂಚೋಳಿಯಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಅವರಿಗೆ ₹2 ಸಾವಿರ ಕೋಟಿ ಎಲ್ಲಿಂದ ಬಂತು? ಅವರದೇ ‘ಸಿದ್ಧಸಿರಿ’ ಸಹಕಾರ ಬ್ಯಾಂಕ್ ವಹಿವಾಟು–ಹೀಗೆ ಎಲ್ಲವನ್ನೂ ಬಹಿರಂಗಪಡಿಸಿ ತಮ್ಮ ಪರಿಶುದ್ಧತೆ ಸಾಬೀತು ಪಡಿಸಬೇಕು’ ಎಂದು ಸವಾಲು ಹಾಕಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT