ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಡಿ | ಟಿ.ಸಿಯಲ್ಲಿ ದೋಷ: ಮುಖ್ಯಶಿಕ್ಷಕನ ಮೇಲೆ ಹಲ್ಲೆ

Published 31 ಮೇ 2024, 13:10 IST
Last Updated 31 ಮೇ 2024, 13:10 IST
ಅಕ್ಷರ ಗಾತ್ರ

ಇಂಡಿ: ವರ್ಗಾವಣೆ ಪ್ರಮಾಣ ಪತ್ರದಲ್ಲಿ ಲಿಂಗ ಕಾಲಂನಲ್ಲಿ ಗಂಡು ಎಂದು ನಮೂದಿಸುವ ಬದಲಾಗಿ ಹೆಣ್ಣು ಎಂದು ತಪ್ಪಾಗಿ ನಮೂದಿಸಿದ್ದರಿಂದ ಮುಖ್ಯಶಿಕ್ಷಕರ ಮೇಲೆ ಇಬ್ಬರು ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಗೊರನಾಳ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದಿದೆ.

ಕುಮಾರ ರಾವುತರಾಯ ಪರಸಪ್ಪ ನಾಗಠಾಣ ಎಂಬ ವಿದ್ಯಾರ್ಥಿಗೆ 9ನೇ ತರಗತಿ ಪ್ರವೇಶಕ್ಕಾಗಿ ನೀಡಬೇಕಾಗಿದ್ದ ವರ್ಗಾವಣೆ ಪತ್ರದಲ್ಲಿ ಲೋಪವಾಗಿತ್ತು. ತಿದ್ದುಪಡಿ ಮಾಡಿ ಗುರುವಾರ ನೀಡಲಾಗಿದೆ. ಆದರೂ ವಿದ್ಯಾರ್ಥಿಗೆ ಸಂಬಂಧವೇ ಇಲ್ಲದ ಅರ್ಜುನ ಖೇಡ ಹಾಗೂ ಸುಧಾಕರ ಜಟ್ಟೆಪ್ಪ ಪೂಜಾರಿ ಎಂಬುವವರು ಹಲ್ಲೆ ಮಾಡಿ ಬೆದರಿಕೆ ಒಡ್ಡಿದ್ದಾರೆ ಎಂದು ಮುಖ್ಯಶಿಕ್ಷಕ ಮಲ್ಲೇಶಿ ಚಿಮ್ಮಾಗೋಳ ಅವರು ಇಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ಖಂಡಿಸಿ ಠಾಣಾ ಪಿಎಸ್ಐ ಮಂಜುನಾಥ ಹಲಕುಂದ ಅವರಿಗೆ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮನವಿ ಸಲ್ಲಿಸಲಾಯಿತು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಟಿ.ಪಾಟೀಲ ಮಾತನಾಡಿ, ಮುಖ್ಯಶಿಕ್ಷಕ ಎಂ.ಪಿ.ಚಿಮ್ಮಾಗೋಳ ಅವರ ಮೇಲಿನ ಹಲ್ಲೆ ಖಂಡನಿಯ. ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಜಯರಾಮ ಚವ್ಹಾಣ, ಅಲ್ಲಾಬಕ್ಷ ವಾಲಿಕಾರ, ಎಸ್.ವಿ.ಹರಳಯ್ಯ, ರಾಮಸಿಂಗ ಕನ್ನೊಳ್ಳಿ ಮತ್ತು ಹುಚ್ಚಪ್ಪ ತಳವಾತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT