ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯಭಾಗ್ಯ, ನ್ಯಾಯಭಾಗ್ಯ ಕೊಡಿ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ

Published 2 ಫೆಬ್ರುವರಿ 2024, 15:40 IST
Last Updated 2 ಫೆಬ್ರುವರಿ 2024, 15:40 IST
ಅಕ್ಷರ ಗಾತ್ರ

ವಿಜಯಪುರ: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಮೊಟಕುಗೊಳಿಸಿ ಉನ್ನತ ದರ್ಜೆಯ ಶಿಕ್ಷಣ ಭಾಗ್ಯ, ಆರೋಗ್ಯಭಾಗ್ಯ, ನ್ಯಾಯಭಾಗ್ಯ ನೀಡುವಂತೆ ಹಾಗೂ ಶೂನ್ಯ ಬ್ರಷ್ಟಾಚಾರ, ಶೇ100 ರಷ್ಟು ಪಾರದರ್ಶಕ ಆಡಳಿತ ನೀಡುವಂತೆ ಸರ್ಕಾರಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾ ಘಟಕದ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಜಗದೇವ ಸೂರ್ಯವಂಶಿ ಮಾತನಾಡಿ, ರಾಜ್ಯದ ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಿಕ್ಷಣ ಒದಗಿಸಬೇಕು ಎಂದು ಆಗ್ರಹಿಸಿದರು.

ನೀರಾವರಿ, ಕೃಷಿ, ತೋಟಗಾರಿಕೆ, ಅರಣ್ಯ, ಪ್ರಾಣಿ, ಸಸ್ಯಸಂಕುಲ ಅಭಿವೃದ್ಧಿ ಹಾಗೂ ಕೈಗಾರಿಕೆಗಳನ್ನು ಅಭಿವೃದ್ಧಿಗೊಳಿಸಿ ಎಲ್ಲಾ ಸಮುದಾಯದ ದುಡಿಯುವ ಕೈಗಳಿಗೆ ಸರ್ಕಾರದಿಂದ ಕೆಲಸ ನೀಡಬೇಕು ಎಂದರು.

ಗಿರೀಶ ಕಲಘಟಗಿ, ಲಿಂಗರಾಜ ಬಿದರಕುಂದಿ, ರಾಜಶೇಖರ ಹುಲ್ಲೂರ, ಸಂಕೇತ ಪಟ್ಟಣದ, ಶರಣಬಸು ಕೋನಳ್ಳಿ, ಬಾಬಾಸಾಬ ಹತ್ತರಕಿಹಾಳ, ಶಂಕರ ಕಲಬುರಗಿ, ಪಲ್ಲವಿ ಹೊನಮೊರೆ, ಕಾವೇರಿ ಹಿರೇಮಠ, ಶ್ರೀಶೈಲ ಕಾಂಬಳೆ, ಜಯಶ್ರೀ ನನ್ನಮ, ಶೃತಿ ತಾರಾಪೂರ, ಸುಧಾ ಬೆಳ್ಳೆಣ್ಣವರ, ಮಹಾದೇವ ಗೌಂಡಿ, ಪ್ರಕಾಶ ಬೆನ್ನೂರ, ಸಾಬಣ್ಣ ಇಟಗಿ, ಡಾ. ಶೌಕತ್ ಮಳ್ಳಿಕರ, ರವಿ ಪೂಜಾರಿ, ರಾಜೀವ ಜಯಶಂಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT