ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಬಿಸಿಲಿನಿಂದ ತಪ್ಪಿಸಿಕೊಳ್ಳಲು ಹಸಿರ ಹೊದಿಕೆ; ನೆರಳಿನ ಆಸರೆ

ವಿಜಯಪುರ ಮಹಾನಗರ ಪಾಲಿಕೆಯಿಂದ ವ್ಯವಸ್ಥೆ
Published 30 ಏಪ್ರಿಲ್ 2024, 23:52 IST
Last Updated 30 ಏಪ್ರಿಲ್ 2024, 23:52 IST
ಅಕ್ಷರ ಗಾತ್ರ

ವಿಜಯಪುರ: ಬೇಸಿಗೆಯ ಪ್ರಖರ ಬಿಸಿಲಿನಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು, ಪಾದಚಾರಿಗಳಿಗೆ ವಿಜಯಪುರ ಮಹಾನಗರ ಪಾಲಿಕೆಯು ನಗರದ ಪ್ರಮುಖ ಜನದಟ್ಟಣೆ ವೃತ್ತಗಳಲ್ಲಿ ನೆರಳಿನ ವ್ಯವಸ್ಥೆ ಮಾಡಿದೆ.

ಬೇಸಿಗೆಯಲ್ಲಿ ಇಲ್ಲಿನ ಉಷ್ಣಾಂಶ ಸರಾಸರಿ 40ರಿಂದ 42 ಡಿಗ್ರಿ ಇರುತ್ತದೆ. ಕೆಲ ಸಲ 43 ಡಿಗ್ರಿಗೂ ತಲು‍ಪುತ್ತದೆ. ಆಗ ರಸ್ತೆಗಳಲ್ಲಿ ಓಡಾಡುವುದು, ವಾಹನಗಳಲ್ಲಿ ಸಂಚರಿಸುವುದು ಇನ್ನೂ ಕಷ್ಟ.

‘ಬಿಸಿಲಾಘಾತಕ್ಕೆ (ಸನ್‌ಸ್ಟ್ರೋಕ್‌) ಕೆಲವರು ಕುಸಿದು ಬಿದ್ದರೆ, ಆಯಾಸದಿಂದ ಇನ್ನೂ ಕೆಲವರು ನಿಶ್ಶಕ್ತರಾಗುತ್ತಾರೆ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವ ವೃದ್ಧರು, ಮಹಿಳೆಯರು, ಮಕ್ಕಳು, ಅನಾರೋಗ್ಯ ಪೀಡಿತರು ಸುಡು ಬಿಸಿಲಿನಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಹತ್ತಾರು ನಿಮಿಷ ಕಾಯಲು ಸಮಸ್ಯೆಯಾಗುತ್ತದೆ. ಈ ಎಲ್ಲ ಕಾರಣಗಳಿಂದ ಪಾಲಿಕೆಯು ನೆರಳಿನ ವ್ಯವಸ್ಥೆ ಮಾಡಿದ್ದು ಅನುಕೂಲಕಾರಿಯಾಗಿದೆ’ ಎಂದು ಉಪಮೇಯರ್ ದಿನೇಶ ಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಸ್‌ ನಿಲ್ದಾಣದ ಎದುರಿನ ವೃತ್ತ, ಬಸವೇಶ್ವರ ವೃತ್ತ, ಗಾಂಧಿ ಚೌಕಿಯಲ್ಲಿ ರಸ್ತೆಯ ಮೇಲೆ ಉದ್ದನೆಯ ಹಸಿರು ಬಲೆಯನ್ನು ಶಾಮಿಯಾನದಂತೆ ಅಳವಡಿಸಿ, ನೆರಳಿನ ವ್ಯವಸ್ಥೆ ಮಾಡಲಾಗಿದೆ. ಈ ವ್ಯವಸ್ಥೆ ಜೂನ್‌ವರೆಗೆ ಇರಲಿದೆ.

ವಿಜಯಪುರ ನಗರದ ಗಾಂಧಿ ಚೌಕಿನಲ್ಲಿ ಅಳವಡಿಸಿರುವ ಹಸಿರು ಹೊದಿಕೆಯಡಿ ಆಸರೆ ಪಡೆದ ವಾಹನ ಸವಾರರು
–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಗಾಂಧಿ ಚೌಕಿನಲ್ಲಿ ಅಳವಡಿಸಿರುವ ಹಸಿರು ಹೊದಿಕೆಯಡಿ ಆಸರೆ ಪಡೆದ ವಾಹನ ಸವಾರರು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT