ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ: ಉಪನ್ಯಾಸಕರಿಂದ ಅರೆಬೆತ್ತಲೆ ಪ್ರತಿಭಟನೆ

ಸೇವೆ ಕಾಯಮಾತಿಗೆ ಆಗ್ರಹಿಸಿ 22 ದಿನಗಳಿಂದ ಧರಣಿ
Published 14 ಡಿಸೆಂಬರ್ 2023, 15:46 IST
Last Updated 14 ಡಿಸೆಂಬರ್ 2023, 15:46 IST
ಅಕ್ಷರ ಗಾತ್ರ

ವಿಜಯಪುರ: ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಅನಿರ್ದಿಷ್ಟಾವಧಿ ಧರಣಿ ಗುರುವಾರ 22ನೇ ದಿನಕ್ಕೆ ಕಾಲಿಟ್ಟಿದೆ.

ಕಳೆದ 20 ವರ್ಷಗಳಿಂದ ಕಡಿಮೆ ಸಂಬಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆ ಕಾಯಂಗೊಳಿಸುವಂತೆ ಆಗ್ರಹಿಸಿ ಕೈಗೊಂಡಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಗುರುವಾರ ಉಪನ್ಯಾಸಕರು ಅರೆಬೆತ್ತಲೆಯಾಗಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.

ಅತಿಥಿ ಉಪನ್ಯಾಸಕರು ಕಳೆದ 22 ದಿನಗಳಿಂದ ಧರಣಿನಿರತರಾದರೂ ರಾಜ್ಯ ಸರ್ಕಾರ ಯಾವುದೇ ನಿರ್ಣಯಕ್ಕೆ ಬಂದಿಲ್ಲ. ಆದ್ದರಿಂದಲೇ ವಿದ್ಯಾರ್ಥಿಗಳಿಗೂ 22 ದಿನಗಳಿಂದ ಯಾವುದೇ ತರಗತಿಗಳು ನಡೆದಿಲ್ಲ ಎಂದು ಆಕ್ರೋಶ ಹೊರ ಹಾಕಿದರು.  

ಧರಣಿಯಲ್ಲಿ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಡಬ್ಬಿ, ಕಾರ್ಯದರ್ಶಿ ಆರ್.ಎಲ್. ಕಡೆಮನಿ, ಆನಂದ ಕುಲಕರ್ಣಿ, ರಾಜು ಚವ್ಹಾಣ, ಎಸ್.ಆಯ್. ಎಂಬತ್ತನಾಳ, ರಮೇಶ ತೇಲಿ, ಆರ್.ಸಿ. ದಾಯಗೊಂಡ, ರೇಣುಕಾ ಹೆಬ್ಬಾಳ, ಅಶೋಕ ಬಿರಾದಾರ, ಡಿ.ಬಿ. ಕುಲಕಣಿ, ಎಸ್.ಎ. ಪಾಟೀಲ, ಎಸ್.ಡಿ. ಬಿರಾದಾರ, ಎಸ್.ಬಿ. ಗಂಗಮಾಲಿ, ಎಸ್.ಎಸ್. ಗಡಿಗೆಪ್ಪಗೌಡರ, ಎಸ್.ಪಿ. ತಳವಾರ, ಆರ್.ಬಿ. ನಾಗರಡ್ಡಿ, ಎಂ.ಎಸ್. ಶಿವಶರಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT