ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದಭಾವಿ, ಐಹೊಳ್ಳಿ ಅವರಿಗೆ ಸನ್ಮಾನ

Published 21 ಮಾರ್ಚ್ 2024, 16:23 IST
Last Updated 21 ಮಾರ್ಚ್ 2024, 16:23 IST
ಅಕ್ಷರ ಗಾತ್ರ

ವಿಜಯಪುರ: ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನಾಮನಿರ್ದೇಶನಗೊಂಡ ಸಂಶೋಧಕ ಡಾ.ಎಂ.ಎಸ್. ಮದಭಾವಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಡಾ.ವಿ.ಡಿ. ಐಹೊಳ್ಳಿ ಅವರನ್ನು ಬಿಎಲ್‍ಡಿಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ವತಿಯಿಂದ ಗುರುವಾರ ಸನ್ಮಾನಿಸಲಾಯಿತು.

ನಂತರ ಮಾತನಾಡಿದ ಮಹಿಳಾ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ಶರಣಬಸಪ್ಪ ಅರಕೇರಿ, ಸಂಶೋಧನಾ ಕ್ಷೇತ್ರಕ್ಕೆ ಡಾ.ಮದಭಾವಿ, ಡಾ.ಐಹೊಳ್ಳಿ ಅವರು ನೀಡಿದ ಕೊಡುಗೆ ಅಪಾರ, ಡಾ.ಕಲಬುರ್ಗಿ ಅವರ ಅಪ್ಪಟ ಶಿಷ್ಯರಾಗಿ, ಸಮಗ್ರ ವಚನ ಸಾಹಿತ್ಯ ಸಂಪಾದನೆ, ಡಾ.ಕಲಬುರ್ಗಿ ಸಮಗ್ರ ಸಾಹಿತ್ಯ ಹಾಗೂ ಆದಿಲ್‍ಷಾಹಿ ಸಮಗ್ರ ಸಾಹಿತ್ಯ ಹೀಗೆ ಎಲ್ಲ ಸಂಶೋಧನೆಗಳಲ್ಲಿ ತೊಡಗಿಸಿಕೊಂಡು ಸಂಶೋಧನಾ ಕ್ಷೇತ್ರಕ್ಕೆ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ ಎಂದರು.

ಡಾ.ವಿ.ಡಿ. ಐಹೊಳ್ಳಿ ಅವರು ಶಿಕ್ಷಣ ತಜ್ಞರಾಗಿ, ಶಿಕ್ಷಕರನ್ನು ರೂಪಿಸಿ, ಸಾಹಿತ್ಯ-ಸಂಶೋಧನಾ ಕ್ಷೇತ್ರ ಎರಡಲ್ಲಿಯೂ ಅನನ್ಯ ಸಾಧನೆ ಮಾಡುತ್ತಾ ಮುನ್ನಡೆದಿದ್ದಾರೆ ಎಂದರು.

ಸಂಶೋಧಕ ಮಲ್ಲಿಕಾರ್ಜುನ ಮೇತ್ರಿ, ಪಾಲಿಕೆ ಸದಸ್ಯ ಅಶೋಕ ನ್ಯಾಮಗೊಂಡ, ಪ್ರೊ.ಮಲ್ಲಿಕಾರ್ಜುನ ಹೆಬ್ಬಿ, ಪ್ರೊ. ಎಸ್.ಜಿ.ಹೆಬ್ಬಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT