ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವನಹಳ್ಳಿ ಮಲ್ಲಿಕಾರ್ಜುನ ದೇವಸ್ಥಾನ ಲೋಕಾರ್ಪಣೆ

Published 28 ಏಪ್ರಿಲ್ 2024, 4:33 IST
Last Updated 28 ಏಪ್ರಿಲ್ 2024, 4:33 IST
ಅಕ್ಷರ ಗಾತ್ರ

ವಿಜಯಪುರ: ತಾಲ್ಲೂಕಿನ ಸವನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಮಲ್ಲಿಕಾರ್ಜುನ ದೇವಸ್ಥಾನವನ್ನು ಶ್ರೀಶೈಲ ಪೀಠದ ಜಗದ್ಗುರು ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಲೋಕಾರ್ಪಣೆ ಮಾಡಿದರು.

ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರ ಭವ್ಯವಾದ ಅಡ ಪಲ್ಲಕ್ಕಿ ಉತ್ಸವ ನಡೆಯಿತು. 501 ಕುಂಭ ಹೊತ್ತ ಮಹಿಳೆಯರು, ಗೊಂಬೆ ಕುಣಿತ, ಡೊಳ್ಳು ಕುಣಿತಗಳೊಂದಿಗೆ ಬೃಹತ್ ಮೆರವಣಿಗೆ ನಡೆಯಿತು.

ದೇವಸ್ಥಾನದ ಉದ್ಘಾಟನೆ  ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಮಲ್ಲಿಕಾರ್ಜುನ ದೇವಸ್ಥಾನವನ್ನು ಬಹಳ ಸುಂದರವಾಗಿ ನಿರ್ಮಿಸಿದ್ದೀರಿ ಇದು ಸವನಹಳ್ಳಿಯ ಗ್ರಾಮದ ಬಹುದಿನಗಳ ಭಕ್ತರ ಕನಸು ಇಂದು ಈಡೇರಿದೆ ಎಂದರು.

ದೇವರಲ್ಲಿ ನಿಜವಾದ ನಂಬಿಕೆಯನ್ನು ಇಟ್ಟರೆ ಮಲ್ಲಯ್ಯನ ಕಾಣಲು ಸಾಧ್ಯ, ಈ ಗ್ರಾಮ ಸನವಹಳ್ಳಿ ಅಲ್ಲ ಸುವರ್ಣ ಹಳ್ಳಿ ಒಂದಲ್ಲ ಒಂದು ದಿನ ಆಗುವುದು ಅನುಮಾನ ಇಲ್ಲ ಎಂದರು.

ಶ್ರೀಶೈಲದಲ್ಲಿ ಪಾದಯಾತ್ರಿಕರಿಗೆ ವಿಶೇಷವಾಗಿ ಕಂಬಿ ಮಂಟಪ ಎಂಬ ವಿಶಾಲವಾದ ನಿರ್ಮಾಣ ಮಾಡಲಾಗುತ್ತಿದೆ, ಸುಮಾರು 500 ಮಲ್ಲಯ್ಯ ಕಂಬಿಗಳು ಇಳಿದುಕೊಳ್ಳಲು ಕಂಬಿ ಮಂಟಪ ವ್ಯವಸ್ಥೆ ಮಾಡಲಾಗುವುದು, ಭಕ್ತರ ಸಾಕಾರದಿಂದ ಶ್ರೀಶೈಲದಲ್ಲಿ ಅನೇಕ ವ್ಯವಸ್ಥೆಗಳನ್ನು ಮಾಡುತ್ತ ಇದ್ದೇವೆ ಎಂದು ಶ್ರೀಗಳು ಹೇಳಿದರು.

ಬಾಗಲಕೋಟೆ  ಮಠದ ಸಿದ್ಧಲಿಂಗ ಶಿವಾಚಾರ್ಯರು, ಶಿವಕುಮಾರ ಶಿವಾಚಾರ್ಯರು, ಮಹಾಂತಲಿಂಗ ಶಿವಾಚಾರ್ಯರು, ಮನಗೂಳಿ ಮಠದ ಅಭಿನವ ಸಂಗನಬಸವ ಶಿವಾಚಾರ್ಯರು, ಗುಳೇದಗುಡ್ಡದ ಅಮರೇಶ್ವರ ಮಠ ನೀಲಕಂಠೇಶ್ವರ ಶಿವಾಚಾರ್ಯ ಹಿರೇಮಠ, ಮುಳವಾಡದ ಸಿದ್ಧಲಿಂಗ ಶಿವಾಚಾರ್ಯರು, ಜೈನಾಪುರದ ರೇಣುಕ ಶಿವಾಚಾರ್ಯರು, ಕಲಾಣೇಶ್ವರ ಮಠದ ವಿವೇಕಾನಂದ ದೇವರು, ತೊರವಿ ಶ್ರೀಮಠದ ಅಭಿನವ ಮರುಗೇಂದ್ರ ದೇವರು ಸಾನ್ನಿಧ್ಯ ವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT