ವಿಜಯಪುರ: ನೀಲಕಂಠ ಶಿವಾಚಾರ್ಯ ಶ್ರೀ ಲಿಂಗೈಕ್ಯ

ವಿಜಯಪುರ: ಜಿಲ್ಲೆಯ ಚಿಮ್ಮಲಗಿಯ ಅರಳೆಲೆ ಕಟ್ಟಿಮನಿ ಹಿರೇಮಠದ ನೀಲಕಂಠ ಶಿವಾಚಾರ್ಯ ಶ್ರೀಗಳು (92) ಗುರುವಾರ ರಾತ್ರಿ 10.02ಕ್ಕೆ ಲಿಂಗೈಕ್ಯರಾದರು.
15 ದಿನಗಳಿಂದ ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ಶ್ರೀಗಳ ಅಂತ್ಯಕ್ರಿಯೆ ಜನವರಿ 13ರಂದು ಸಂಜೆ 4ಕ್ಕೆ ಚಿಮ್ಮಲಗಿ ಭಾಗ-2 ರಲ್ಲಿ ನಡೆಯಲಿದೆ.
ಶ್ರೀಗಳು ಕಳೆದ ವರ್ಷವಷ್ಟೇ ಮಠಕ್ಕೆ ಸಿದ್ಧ ರೇಣುಕ ದೇವರನ್ನು ತಮ್ಮ ಮುಂದಿನ ಪೀಠಾಧಿಕಾರಿಯನ್ನಾಗಿ ನೇಮಿಸಿ ಪಟ್ಟಾಭಿಷೇಕ ಮಾಡಿದ್ದರು.
ಚಿಮ್ಮಲಗಿ, ಯಂಭತ್ನಾಳ, ವಿಜಯಪುರದಲ್ಲಿ ಈ ಮಠದ ಶಾಖಾ ಪೀಠಗಳಿದ್ದು, ಸಹಸ್ರಾರು ಭಕ್ತರನ್ನು ಹೊಂದಿದ್ದಾರೆ.
1999-2000ರಲ್ಲಿ 13 ತಿಂಗಳು ಮೌನಾನುಷ್ಠಾನ ಕೈಗೊಂಡು, ಭಕ್ತರ ಪ್ರೀತಿಗೆ ಪಾತ್ರವಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.