ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಡಗುಂದಿ: ಅನಂತಕುಮಾರ ಹೆಗಡೆ ವಜಾಕ್ಕೆ ಆಗ್ರಹ

Published 17 ಜನವರಿ 2024, 14:43 IST
Last Updated 17 ಜನವರಿ 2024, 14:43 IST
ಅಕ್ಷರ ಗಾತ್ರ

ನಿಡಗುಂದಿ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಅಸಂವಿಧಾನಿಕ ಪದ ಬಳಸಿದ ಅನಂತಕುಮಾರ ಹೆಗಡೆ ಅವರನ್ನು ಸಂಸತ್ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ನಿಡಗುಂದಿ ತಾಲ್ಲೂಕು ಕಾಂಗ್ರೆಸ್ ಸಮಿತಿ ಬುಧವಾರ ಪ್ರತಿಭಟನೆ ನಡೆಸಿತು.

ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ, ಅಸಂವಿಧಾನಿಕ ಪದ ಬಳಸಿರುವುದು ಎಷ್ಟು ಸರಿ? ತಕ್ಷಣವೇ ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಾತ್ರ ನಮ್ಮ ವಿರೋಧಿ ಎಂದು ಪ್ರಚೋದಾತ್ಮಕ ಭಾಷಣ ಮಾಡಿ, ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಸಂಸದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಭಾಷೆ ಬಳಸಿರುವ ಹೆಗಡೆ ಅವರು ಸುಸಂಸ್ಕೃತರೇ ಎಂದು ಪ್ರಶ್ನಿಸಿದರು.

ಬಹಿರಂಗವಾಗಿ ಮುಖ್ಯಮಂತ್ರಿಯವರಿಗೆ ಕ್ಷಮೆ ಕೋರಬೇಕು ಮತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಸಿದ್ದಣ್ಣ ನಾಗಠಾಣ, ಸಂಗಮೇಶ ಬಳಿಗಾರ, ರಾಘವೇಂದ್ರ ವಡವಡಗಿ, ಆಂಜನೇಯ ಮೋಪಗಾರ, ಮೌಲಾಸಾಬ್ ಅತ್ತಾರ, ರಮೇಶ ಮಾಗಿ ಮಾತನಾಡಿದರು.  ಶೇಖರ ರೂಡಗಿ, ಸಂಜೀವ ರಾಠೋಡ, ಬಸವರಾಜ ವಂದಾಲ, ಬಿ.ವೈ. ನಿಂಬಾಳ, ನಜೀರ ಪೆಂಡಾರಿ, ತಮ್ಮಣ್ಣ ಬಂಡಿವಡ್ಡರ, ಸುರೇಶ ಸಣ್ಣಮನಿ, ಎನ್.ಕೆ. ರಾಠೋಡ, ಬಿ.ಎಸ್. ವಡ್ಡರ, ಎಂ.ಎಚ್. ಮೋಪಗಾರ, ಬಸಯ್ಯ ಗಣಾಚಾರಿ, ಬಸಯ್ಯ ಸಾಲಿಮಠ, ಮೌಲಾ ಬಾಣಕಾರ, ಪರಶುರಾಮ ಕಾರಿ, ಆರ್.ಎಚ್. ಬಾಗೇವಾಡಿ, ಮೋತಿಸಾ ತಳೇವಾಡ, ಬಿ.ಎಚ್. ಗುಂಡಿನಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT