ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮಾಣಿಕ್ಯ ಪ್ರಶಸ್ತಿಗೆ 21 ಸಾಧಕರು ಆಯ್ಕೆ

Published 19 ಫೆಬ್ರುವರಿ 2024, 15:52 IST
Last Updated 19 ಫೆಬ್ರುವರಿ 2024, 15:52 IST
ಅಕ್ಷರ ಗಾತ್ರ

ವಿಜಯಪುರ: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವಿಜಯಪುರ ನಗರ ಘಟಕ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮದ ಅಂಗವಾಗಿ ನೀಡಲಾಗುತ್ತಿರುವ ರಾಜ್ಯ ಮಟ್ಟದ ಕನ್ನಡ ಮಾಣಿಕ್ಯ ಪ್ರಶಸ್ತಿಗೆ ರಾಜ್ಯದ 21 ಸಾಧಕರನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರಿನ ಡಾ.ಸತೀಶಕುಮಾರ ಹೊಸಮನಿ (ಜೀವಮಾನ ಸಾಧನೆ), ಕಲಬುರಗಿಯ ಅಜಯಕುಮಾರ.ಡಿ. (ಆಡಳಿತ), ವಿಜಯಪುರದ ವೆಂಕಟಪ್ಪ ಭೂಸರಡ್ಡಿ (ಸೈನಿಕ), ಮಹೇಶ ರಾಂಪೂರ (ಇಂಜಿನಿಯರ್‌ ಕ್ಷೇತ್ರ), ಎಸ್.ಟಿ.ಕನಕಾ (ಸರ್ಕಾರಿ ಸೇವೆ), ಸಿದ್ದು ಇಜೇರಿ (ಸಂಘಟನೆ), ಸಂಗಮೇಶ ಚೂರಿ (ಪತ್ರಿಕೋದ್ಯಮ), ರಾಜಶೇಖರ ಪಾಟೀಲ (ಸಹಕಾರಿ), ದತ್ತಾತ್ರೇಯ ಹೊಸಮಠ (ಸಾಹಿತ್ಯ) ಕ್ಷೇತ್ರದಲ್ಲಿ ಆಯ್ಕೆಯಾಗಿದ್ದಾರೆ.

ಮುದ್ದೇಬಿಹಾಳದ ಮಹಾದೇವಿ ವಾಲಿ (ಸಾಹಿತ್ಯ), ಬಾಗಲಕೋಟೆಯ ಚಂದ್ರಶೇಖರ ಪ್ಯಾಟಿ (ಸರ್ಕಾರಿ ಸೇವೆ), ಬಸವನಬಾಗೇವಾಡಿಯ ಮಂಜುಳಾಶಾಸ್ರ್ತಿ (ರಂಗಭೂಮಿ), ಸೃಷ್ಠಿ ನಾಗೋಡ (ಸಾಹಿತ್ಯ), ಬಬಲೇಶ್ವರದ ಈರಣ್ಣ ಶಿರಮಗೊಂಡ (ಸಮಾಜಸೇವೆ), ಶಿವಾನಂದ ಕಟ್ಟಿಮನಿ (ಪರಿಸರ), ಮನಗೂಳಿಯ ಮಹಾದೇವ ಭೋಸಲೆ (ಕೃಷಿ), ಶಂಕರಗೌಡ ಬಿರಾದಾರ (ಸಮಾಜಸೇವೆ), ಧಾರವಾಡದ ಮೇಘನಾ ಬ್ಯಾಹಟ್ಟಿ (ಸಾಹಿತ್ಯ), ಹತ್ತರಕಿಹಾಳದ ಭೀಮರಾಯಗೌಡ ಬಿರಾದಾರ (ಕಲೆ), ಗಣಿ ಗ್ರಾಮದ ರವಿ ಚಿನಗುಂಡೆ (ವಿಜ್ಞಾನ) ಹಾಗೂ ಮನ್ನಿಕೇರಿಯ ಲಕ್ಷ್ಮಿ ಕಿಣಗಿ (ಶಿಕ್ಷಣ) ಆಯ್ಕೆಯಾಗಿದ್ದಾರೆ.

ನಗರದ ಚೇತನಾ ಕಾಲೇಜಿನ ಸಭಾಂಗಣದಲ್ಲಿ ಫೆ. 24 ರಂದು ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ನಗರ ಘಟಕದ ಅಧ್ಯಕ್ಷ ಶಿವಾಜಿ ಮೋರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT