ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವನಬಾಗೇವಾಡಿ | ದೇವಸ್ಥಾನಗಳಲ್ಲಿ ವಿಶೇಷ ಪೂಜೆ; ಪ್ರಸಾದ ವಿತರಣೆ

Published 17 ಏಪ್ರಿಲ್ 2024, 15:15 IST
Last Updated 17 ಏಪ್ರಿಲ್ 2024, 15:15 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬುಧವಾರ ಹನುಮಾನ ದೇವಸ್ಥಾನಗಳಲ್ಲಿ ರಾಮನವಮಿ ಅಂಗವಾಗಿ ರಾಮನ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ಪೂಜೆ ಸಲ್ಲಿಸಿ, ಪ್ರಸಾದ ವಿತರಿಸಲಾಯಿತು. 

ಪಟ್ಟಣದ ಹನುಮಾನ ದೇವಸ್ಥಾನದಲ್ಲಿ ವಿಪ್ರಸಮಾಜದ ಮಹಿಳೆಯರು ಬಾಲ ರಾಮನನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡುವ ಸಂಪ್ರದಾಯ ನೆರವೇರಿಸಿ ಪೂಜೆ ಸಲ್ಲಿಸಿದರು. ಶ್ರೀರಾಮ, ಹನುಮಾನ ಕುರಿತಾದ ಭಜನೆಗಳನ್ನು ಹಾಡಿದರು. ವಾದಿರಾಜ ಯರ್ಜುವೇದಿ ಅವರಿಂದ ರಾಮನವಮಿ ಅಂಗವಾಗಿ ಹನುಮಾನ ದೇವರಿಗೆ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು.

ರಾಮಾಚಾರಿ ಯರ್ಜುವೇದಿ, ವಿಠ್ಠಲ ಕುಲಕರ್ಣಿ, ಅನಿಲ ದೇಶಪಾಂಡೆ, ವಿನಾಯಕ ದೇಶಪಾಂಡೆ, ಶ್ರೀಧರ ಕುಲಕರ್ಣಿ, ಅನಿಲ ಕುಲಕರ್ಣಿ, ಪ್ರಲ್ಹಾದ ಕುಲಕರ್ಣಿ, ರಾಯಗುಂಡ ಕುಲಕರ್ಣಿ, ನಾಗವೇಣಿ ಕುಲಕರ್ಣಿ, ವಿದ್ಯಾ ಕುಲಕರ್ಣಿ, ಸುಜಾತಾ ಕುಲಕರ್ಣಿ, ಅನಿತಾ ದೇಶಪಾಂಡೆ, ಕಲ್ಪನಾ ಕುಲಕರ್ಣಿ, ನಂದಾ ಕುಲಕರ್ಣಿ, ಸಾಧನಾ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT