ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಡಿಪಿಐ ಅಮಾನತು: ಕೆಎಟಿ ತಡೆಯಾಜ್ಞೆ

Published 7 ಫೆಬ್ರುವರಿ 2024, 16:23 IST
Last Updated 7 ಫೆಬ್ರುವರಿ 2024, 16:23 IST
ಅಕ್ಷರ ಗಾತ್ರ

ವಿಜಯಪುರ: ಐಇಇಡಿಎಸ್ (ಅಂಗವಿಕಲ ಮಕ್ಕಳಿಗೆ ರೂಪಿಸಿದ ವಿಶೇಷ ಯೋಜನೆ) ಯೋಜನೆ ಅನುಷ್ಠಾನದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಡಿ ವಿಜಯಪುರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸೇರಿದಂತೆ ಮೂವರು ಅಧಿಕಾರಿಗಳನ್ನು ವಾರದ ಹಿಂದೆ ಕೆಲಸದಿಂದ ಅಮಾನತುಗೊಳಿಸಿ ಹೊರಡಿಸಿದ್ದ ಸರ್ಕಾರದ ಆದೇಶಕ್ಕೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆ.ಎ.ಟಿ) ಕಲಬುರ್ಗಿ ವಿಭಾಗೀಯ ಪೀಠ ಬುಧವಾರ ತಡೆಯಾಜ್ಞೆ ನೀಡಿದೆ.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಆಡಳಿತ) ಎನ್.ಎಚ್. ನಾಗೂರ, ವಿಜಯಪುರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಹಿರಿಯ ಉಪನ್ಯಾಸಕರಾದ ಎಸ್.ಎ.ಮುಜಾವರ, ಎ.ಎಸ್. ಹತ್ತಳ್ಳಿ ಅವರನ್ನು ಅಮಾನತ್ತುಗೊಂಡಿದ್ದರು.

ಸರ್ಕಾರದ ಅಮಾನತು ಆದೇಶವನ್ನು ಪ್ರಶ್ನಿಸಿ, ಮೂವರು ಅಧಿಕಾರಿಗಳು ಕೆಎಟಿ ಮೆಟ್ಟಿಲೇರಿದ್ದರು. ಅರ್ಜಿದಾರರ ಪರವಾಗಿ ವಿಜಯ ಸಾರಥಿ, ಎಂ. ಮಧುಸೂದನ ಮತ್ತು ಕೆ.ಟಿ.ಗರಡಿಮನಿ ವಾದ ಮಂಡಿಸಿದ್ದರು. ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯವು ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡಿ ಅಧಿಕಾರಿಗಳಿಗೆ ಈ ಮುಂಚೆ ಕಾರ್ಯನಿರ್ಹಿಸುತ್ತಿರುವ ಸ್ಥಳದಲ್ಲಿಯೇ  ಮುಂದುವರಿಸಲು ಸೂಚಿಸಿದೆ.

ಏನಿದು ಪ್ರಕರಣ: 2010-11 ಹಾಗೂ 2012-13ನೇ ಸಾಲಿನಲ್ಲಿ ಪ್ರೌಢ ಶಾಲಾ ಹಂತದಲ್ಲಿ ಓದುತ್ತಿರುವ 9 ಮತ್ತು 10ನೇ ತರಗತಿ ಅಂಗವಿಕಲ ಮಕ್ಕಳಿಗೆ ರೂಪಿಸಿದ ವಿಶೇಷ ಯೋಜನೆ (ಐಇಇಡಿಎಸ್) ಅನುಷ್ಠಾನದಲ್ಲಿ ಲೋಪವೆಸಗಿರುವರೆಂಬ ಆರೋಪದಡಿ  ವಿಜಯಪುರದ ಮೂವರು, ಬೆಳಗಾವಿಯ ಇಬ್ಬರು ಸೇರಿದಂತೆ ಒಟ್ಟು 5 ಜನ ಅಧಿಕಾರಿಗಳನ್ನು  ಅಮಾನತುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT