ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ ಉತ್ಸವಕ್ಕೆ ತಾಂಬಾ ಸಜ್ಜು

ಶಕ್ತಿ ದೇವತೆ ಆರಾಧನೆ, ವೈಭವದ ಮೆರವಣಿಗೆ ಪ್ರಸಿದ್ಧ
Published 15 ಅಕ್ಟೋಬರ್ 2023, 6:26 IST
Last Updated 15 ಅಕ್ಟೋಬರ್ 2023, 6:26 IST
ಅಕ್ಷರ ಗಾತ್ರ

ತಾಂಬಾ: ತಾಂಬಾದ ನಾಡದೇವಿ ನವರಾತ್ರಿ ಉತ್ಸವ ಪ್ರತಿ ವರ್ಷ ಸಹಸ್ರಾರು ಭಕ್ತರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಸುತ್ತಮುತ್ತಲಿನ ಗ್ರಾಮಗಳ ಎಲ್ಲ ದಾರಿಗಳು ತಾಂಬಾ ಸೇರುತ್ತಿವೆಯೋನೋ ಎನ್ನುವಂತೆ ಭಾಸವಾಗುತ್ತಿದೆ. ಈ ಬಾರಿಯ ನವರಾತ್ರಿ ಉತ್ಸವಕ್ಕೆ ಗ್ರಾಮ ಸಜ್ಜಾಗಿದೆ. 

‘ಉತ್ತರ ಕರ್ನಾಟಕದ ದಸರಾ’ ಎಂದೇ ಈ ಭಾಗದಲ್ಲಿ ಪ್ರಸಿದ್ಧವಾಗಿರುವ ತಾಂಬಾ ದಸರಾಕ್ಕೆ ಸಿದ್ಧತೆ ಪೂರ್ಣಗೊಂಡಿದೆ. 52ನೇ ನಾಡದೇವಿಯ ನವರಾತ್ರಿ ಉತ್ಸವಕ್ಕೆ ಅಪಾರ ಜನಸ್ತೋಮದ ಸಮ್ಮುಖದಲ್ಲಿ ಅ. 15ರಂದು ಶಾಸಕ ಅಶೋಕ ಮನಗೂಳಿ ಚಾಲನೆ ನೀಡಲಿದ್ದಾರೆ.

ಉತ್ಸವ ಅ.15 ರಿಂದ ಅ.24ರ ವರೆಗೆ ನಡೆಯಲಿದೆ. ಒಂಬತ್ತು ದಿನ ನಿರಂತರವಾಗಿ ವಿವಿಧ ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂಬಾಭವಾನಿ ಎಜುಕೇಷನ್ ಟ್ರಸ್ಟ್‌ ಹಾಗೂ  ತಾಂಬಾದ ಜಗದಂಬಾ ವಿದ್ಯಾವರ್ಧಕ ಸಂಘ  ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಹಯೋಗದೊಂದಿಗೆ 52 ವರ್ಷಗಳಿಂದ ನಾಡದೇವಿ ನವರಾತ್ರಿ ಉತ್ಸವವನ್ನು ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗಿದೆ.

ಸುಮಂಗಲೆಯರಿಂದ ಪೂರ್ಣ ಕುಂಭ ಮೆರವಣಿಗೆ, ಆನೆ, ಕುದುರೆ, ಒಂಟೆ, ಮಹಿಳಾ ಡೊಳ್ಳು ಕುಣಿತ, ಯಕ್ಷಗಾನ, ಜಗ್ಗಲಿ ಮೇಳ, ಝಾಂಜ್‌ ಪಥಕ, ಡಿಜೆ, ಕೋಲಾಟ, ಜಾನಪದ ನೃತ್ಯಗಳು, ನಾಡಿನ ಮೂಲೆ ಮೂಲೆಗಳಿಂದ ಖ್ಯಾತ ಕಲಾವಿದರ ಕಲಾತಂಡಗಳು ಆಗಮಿಸಲಿವೆ. ವಿವಿಧ ಕಲಾ ತಂಡಗಳು ಈಗಾಗಲೇ ಗ್ರಾಮದಲ್ಲಿ ಬೀಡು ಬಿಟ್ಟಿವೆ.  

ದಸರಾ ಉತ್ಸವದ ರೂವಾರಿಗಳಾದ ನಾಗಠಾಣ ಮಾಜಿ ಶಾಸಕ ದೇವಾನಂದ ಚವ್ಹಾಣ ಹಾಗೂ ಜಗದಂಬಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ ಚವ್ಹಾಣ ಅವರ ಅಭಿಮಾನಿ ಬಳಗದೊಂದಿಗೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ ವೈಭವದ ನಾಡದೇವಿಯ ಭವ್ಯ ಮೆರವಣಿಗೆ ನಡೆಯಲಿದೆ. ಸಂಸ್ಥೆಯ ಆವರಣದಲ್ಲಿ ಬೃಹದಾಕಾರದ ಭವ್ಯ ಮಂಟಪದಲ್ಲಿ ಘಟಸ್ಥಾಪನೆಗೊಳ್ಳಲಿದೆ.

 ತಾಂಬಾ ದಸರಾದಲ್ಲಿ ಆನೆ ಕುಣಿತ (ಸಂಗ್ರಹ ಚಿತ್ರ)
 ತಾಂಬಾ ದಸರಾದಲ್ಲಿ ಆನೆ ಕುಣಿತ (ಸಂಗ್ರಹ ಚಿತ್ರ)

ಕೃಷಿ ಮೇಳ ಮಹನೀಯರಿಗೆ ಸನ್ಮಾನ ಒಂಬತ್ತು ದಿನಗಳ ಕಾಲ ಅನ್ನ ಸಂತರ್ಪಣೆ ಅಂತರರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಕಬಡ್ಡಿ ಪಂದ್ಯಾವಳಿ ಜಿಲ್ಲಾ ಮಟ್ಟದ ಮುಕ್ತ ಪುರುಷ ಮತ್ತು ಮಹಿಳೆಯರ ಕೊಕ್ಕೊ ಪಂದ್ಯಾವಳಿ ಕೋಲಾಟ ಸ್ಪರ್ಧೆ ಪುರುಷರಿಗಾಗಿ ಹಗ್ಗ ಜಗ್ಗಾಟ ಮತ್ತು ಸ್ಲೋ ಸೈಕ್ಲಿಂಗ್ ಸ್ಪರ್ಧೆಗಳು ರಂಗೋಲಿ ಸ್ಪರ್ಧೆ ಚಿತ್ರಕಲೆ ನೃತ್ಯ ಸ್ಪರ್ಧೆ ಸಹ ನಡೆಯಲಿವೆ. ಕೃಷಿ ಮೇಳವೂ ಜರುಗಲಿದೆ. ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧಿಸಿದ ಮಹನೀಯರಿಗೆ ಸನ್ಮಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT