ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲಮಟ್ಟಿ: ಆಕರ್ಷಿಸುತ್ತಿವೆ ಮುತ್ತುಗದ ಪುಷ್ಪ...

ಚಂದ್ರಶೇಖರ ಕೋಳೇಕರ
Published 11 ಫೆಬ್ರುವರಿ 2024, 7:05 IST
Last Updated 11 ಫೆಬ್ರುವರಿ 2024, 7:05 IST
ಅಕ್ಷರ ಗಾತ್ರ

ಆಲಮಟ್ಟಿ: ಇಡೀ ಗಿಡದ ತುಂಬಾ ಕೇಸರಿ ಪುಷ್ಪಗಳು.. ಎಲೆಗಳು ಕೂಡಾ ಕೇಸರಿ ಪುಷ್ಪದಂತೆ ಮಾರ್ಪಾಡಿದಂತೆ ಆ ಗಿಡದ ನೋಟ... ಆ ಗಿಡಗಳತ್ತ ಕಣ್ಣು ಹಾಯಿಸಿದರೆ ಸಾಕು ಆ ಕೇಸರಿಯ ಬಣ್ಣವನ್ನೇ ಹೊದ್ದಂತ ದೃಶ್ಯ ಕಣ್ಮನ ಸೆಳೆಯುತ್ತಿವೆ.

ಹೌದು, ಇದು ಮುತ್ತುಗದ ಹೂಗಳ ಸಂಭ್ರಮದ ನೋಟ.. ಇಂತಹ ಅಪರೂಪದ ಪುಷ್ಪ ಆಲಮಟ್ಟಿಯ ಸಂಗೀತ ಕಾರಂಜಿ ಒಳಗೊಂಡ ಮೊಘಲ್ ಉದ್ಯಾನದ ಹತ್ತಿರ ಹಾಗೂ ಫೆಂಚ್ ಉದ್ಯಾನದ ಹತ್ತಿರ ಕಾಣಸಿಗುತ್ತವೆ.

ಐದಾರು ಗಿಡಗಳಿದ್ದು, ಸದ್ಯ ಇಡೀ ಗಿಡವೇ ಕೇಸರಿಮಯವಾಗಿದೆ. ಎಲ್ಲಿಯೂ ಹಸಿರಿನ ಕುರುಹು ಇಲ್ಲದಷ್ಟು ಕೇಸರಿ ಮೈಚಾಚಿದೆ. ಇಡೀ ಮರವೆಲ್ಲ ಹೂವುಗಳು ತುಂಬಿ ನೋಡಲು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಬಹುತೇಕ ಕಣ್ಮರೆಯಾಗುತ್ತಿರುವ ವಿರಳವಾದ ಗಿಡ ಮುತ್ತುಗದ ಗಿಡಗಳು ಆಲಮಟ್ಟಿಯಲ್ಲಿದ್ದದ್ದು ಬಹುತೇಕರಿಗೆ ಅಪರಚಿತ. ಬಹುತೇಕ ಮಲೆನಾಡಿನಲ್ಲಿ ಕಾಣುತ್ತಿದ್ದ ಈ ಗಿಡ ಬಿಸಿಲುನಾಡಿನಲ್ಲಿಯೂ ಕಂಡು ಬಂದಿರುವುದು ಅಪರೂಪ.

ಮರವೂ ಹಲವು ಹಕ್ಕಿ, ಜೇನು, ಕೀಟಗಳನ್ನು ಆಕರ್ಷಿಸುತ್ತಿವೆ. ಮದುವೆ, ಸಭೆ, ಸಮಾರಂಭಗಳಲ್ಲಿ ಊಟ ಎಂದರೆ ಅದು ಮುತ್ತುಗದ ಎಲೆಯಲ್ಲೇ ಮೊದಲು ಆಗುತ್ತಿತ್ತು. ಊಟದ ಎಲೆ ತಯಾರಿಕೆಯಲ್ಲಿ ಇದನ್ನು ಬಳಸುತ್ತಿದ್ದರು. ಮುತ್ತುಗದ ಎಲೆಯಲ್ಲಿ ಊಟ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಂತೆ. ಮುತ್ತುಗ ಔಷಧಯುಕ್ತ ಮರವೂ ಹೌದು. ಆಯುರ್ವೇದ, ನಾಟಿ ಔಷಧವಾಗಿಯೂ ಇದನ್ನು ಈ ಗಿಡದ ತೊಗಟೆ, ಬೀಜ, ಹೂಗಳನ್ನು ಬಳಸುತ್ತಾರೆ.

ಬೆಂಕಿ ಹೂ, ಫ್ಲೇಮ್ ಆಫ್ ಫಾರೆಸ್ಟ್, ಬ್ರಹ್ಮ ವೃಕ್ಷ, ಬುಟಿಯ ಗಮ್ ಟ್ರೀ ಎಂದೆಲ್ಲಾ ಈ ಗಿಡ ಕರೆಯಲ್ಪಡುತ್ತದೆ. ವೈಜ್ಞಾನಿಕ ಹೆಸರು ‘ಬುಟಿಯ ಮೊನೊಸ್ಪರ್ಮ್'.

ಬಹು ಅಪರೂಪದ ಗಿಡಗಳಾಗಿರುವ ಮುತ್ತುಗ ಗಿಡಗಳನ್ನು ಆಲಮಟ್ಟಿಯ ಉದ್ಯಾನ, ನಿಡಗುಂದಿಯ ಬಸವ ಉದ್ಯಾನ ಹಾಗೂ ಮರಿಮಟ್ಟಿಯ ಸಸ್ಯೋದ್ಯಾನಗಳಲ್ಲಿಯೂ ಬೆಳೆಸಲಾಗಿದೆ.  ಆಲಮಟ್ಟಿ ಭಾಗದಲ್ಲಿ 25 ಕ್ಕೂ ಹೆಚ್ಚು ಗಿಡಗಳಿವೆ ಎಂದು ಆರ್ ಎಫ್ ಓ ಮಹೇಶ ಪಾಟೀಲ ಹೇಳಿದರು.

ಕಳೆದ 18 ವರ್ಷಗಳ ಹಿಂದೆ ಬೆಳೆಸಿದ ಸಸಿಗಳು ಸದ್ಯ ಬೃಹತ್ ಮರಗಳಾಗಿ ಇಡೀ ಗಿಡಗಳು ಕೇಸರಿಯಾಗಿವೆ ಎಂದು ಎಆರ್ ಎಫ್ ಓ ಸತೀಶ ಗಲಗಲಿ ತಿಳಿಸಿದರು. 

ಆಲಮಟ್ಟಿಯ ಮೊಘಲ್ ಉದ್ಯಾನದ ಬಳಿ ಆಕರ್ಷಕವಾಗಿ ಕಾಣುವ ಮುತ್ತುಗದ ಕೇಸರಿ ಪುಷ್ಪಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT