ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಹಾಪುರ | ಕೆಲವರ ಸ್ವತ್ತಾದ ಟಿಎಪಿಸಿಎಂಎಸ್: ಆಯುಕ್ತರಿಗೆ ದೂರು

Published 28 ನವೆಂಬರ್ 2023, 16:27 IST
Last Updated 28 ನವೆಂಬರ್ 2023, 16:27 IST
ಅಕ್ಷರ ಗಾತ್ರ

ಶಹಾಪುರ: ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ(ಟಿಎಪಿಸಿಎಂಎಸ್) ಹಲವಾರು ವರ್ಷಗಳಿಂದ ಕೆಲ ವ್ಯಕ್ತಿಗಳ ಸ್ವತ್ತಾಗಿ ಮಾರ್ಪಟ್ಟಿದೆ. ಸಹಕಾರ ತತ್ವ–ಮೌಲ್ಯವನ್ನು ಗಾಳಿ ತೂರಿ ಸಂಘವನ್ನು ಒಂದು ಕುಟುಂಬದ ಸದಸ್ಯರು ಒತ್ತೆಯಾಳುವಂತೆ ನಿರ್ಮಿಸಿಕೊಂಡಿದ್ದಾರೆ. ತಕ್ಷಣ ಸಂಘವನ್ನು ಸೂಪರ್‌ ಸೀಡ್‌ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಮಂಗಳವಾರ ಬೆಂಗಳೂರಿನ ಆಹಾರ ಮತ್ತು ನಾಗರಿಕ ಸಹಕಾರ ಇಲಾಖೆಯ ಆಯುಕ್ತರಿಗೆ ದೂರು ನೀಡಿದ್ದಾರೆ.

ಟಿಎಪಿಸಿಎಂಎಸ್ ಅಧ್ಯಕ್ಷ ಗುರುನಾಥರಡ್ಡಿ ಪಾಟೀಲ್ ಹಳಿಸಗರ ಅವರು 20 ವರ್ಷದಿಂದ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಅಲ್ಲದೇ ಆಡಳಿತ ಮಂಡಳಿಯ ನಿರ್ದೇಶಕರಲ್ಲಿ ಐದಕ್ಕೂ ಹೆಚ್ಚು ನಿರ್ದೇಶಕರು ಹಳಿಸಗರದ ನಿವಾಸಿಗಳು ಆಗಿದ್ದಾರೆ. ಆಡಳಿತವು ಒಬ್ಬ ವ್ಯಕ್ತಿಯ ಕಡೆ ಕೇಂದ್ರಕೃತವಾಗಿ ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಅಲ್ಲದೆ ಜಿಲ್ಲಾ ಆಹಾರ ಮತ್ತು ನಾಗರಿಕ ಇಲಾಖೆಯ ಉಪ ನಿರ್ದೇಶಕ ಭೀಮರಾಯ ಅವರು ಅಕ್ರಮದಲ್ಲಿ ನೇರ ಹೊಣೆಯಾಗಿದ್ದಾರೆ. ತಕ್ಷಣ ಅವರನ್ನು ಅಮಾನತುಗೊಳಿಸಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಪ್ರಾಂತ ರೈತ ಸಂಘದ ಮುಖಂಡರಾದ ಚೆನ್ನಪ್ಪ ಆನೇಗುಂದಿ ಹಾಗೂ ಎಸ್.ಎಂ.ಸಾಗರ ಅವರು ಆಯುಕ್ತರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರ ಪಡಿತರ ಚೀಟಿ ಮುಖಾಂತರ ಸರಬರಾಜು ಮಾಡುವ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ತಾಲ್ಲೂಕಿನ ಗೋದಾಮುಗಳಲ್ಲಿ ಸರಬರಾಜು ಮಾಡಲು ನೇಮಿಸಿದ ಟೆಂಡರದಾರರು ಮಾರ್ಗಸೂಚಿ ಹಾಗೂ ನಿಬಂಧನೆ ಉಲ್ಲಂಘಿಸಿದ್ದಾರೆ. ಗೋದಾಮಿನಿಂದ ಅಕ್ಕಿಯು, ನ್ಯಾಯ ಬೆಲೆ ಅಂಗಡಿಗಳಿಗೆ ಸರಬರಾಜು ಮಾಡುವ ಅಧೀಕೃತವಾಗಿ ಲಾರಿಯ ಮುಖಾಂತರವೇ ಆಗಿದೆ. ಅಧೀಕೃತದ ಲಾರಿ ಮುಖಾಂತರವೇ ಗೋದಾಮಿನಿಂದ ಅಕ್ಕು ಕಳ್ಳತನವಾಗಿದೆ ಎಂಬುವುದನ್ನು ನಿಖರವಾಗಿ ಪತ್ತೆ ಹಚ್ಚಬೇಕು. ಲಾರಿಗಳಿಗೆ ಇನ್ನೂವರೆಗೂ ಯಾಕೆ ಜಿಪಿಎಸ್ ಅಳವಡಿಸಿಲ್ಲ ಎಂಬುದನ್ನು ತನಿಖೆಗೆ ಒಳಪಡಿಸಬೇಕು. ಅಲ್ಲದೇ ಗೋದಾಮು ಕೇಂದ್ರದಲ್ಲಿ ಸಿಸಿಟಿವಿ ಇಲ್ಲದ ಕುರಿತೂ ತನಿಖೆ ನಡೆಸಬೇಕು ಮತ್ತು ಸಾಗಾಣಿಕೆ ಗುತ್ತಿಗೆದಾರನನ್ನು ವಿಚಾರಣೆ ಒಳಪಡಿಸಬೇಕು ಮಾಹಿತಿ ಹಕ್ಕು ಕಾರ್ಯಕರ್ತ ಮಾನಪ್ಪ ಹಡಪದ ಅವರು ಆಗ್ರಹಿಸಿದ್ದಾರೆ.

ಚುರುಕುಗೊಂಡ ತನಿಖೆ: ಅಕ್ಕಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೇಮಿಸಿದ ತನಿಖಾ ತಂಡವು ಮಂಗಳವಾರ ನಗರದ ವಿವಿಧ ಉಗ್ರಾಣ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಗೋದಾಮಿನಲ್ಲಿ ಲಭ್ಯವಿರುವ ಅಕ್ಕಿಚೀಲಗಳ ಎಣಿಕೆ ಹಾಗೂ ರಸೀದಿ, ಸ್ಟಾಕ್ ರಿಜಿಸ್ಟ್ರಾರ್‌ ಪರಿಶೀಲಿಸಿದರು. ತಂಡದಲ್ಲಿ ಉಪ ವಿಭಾಗಾಧಿಕಾರಿ ಹಂಪಣ್ಣ ಸಜ್ಜನ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

ನಗರದ ಆರು ಉಗ್ರಾಣ ಕೇಂದ್ರಗಳಿಗೆ ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಹೆಚ್ಚಿನ ಮಾಹಿತಿ ನೀಡಲು ಆಗುವುದಿಲ್ಲ

ಉಮಕಾಂತ ಹಳ್ಳೆ, ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT