ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಸಾರ್ವತ್ರಿಕ ಚುನಾವಣೆ: ನೋಡಲ್ ಅಧಿಕಾರಿಗಳ ನೇಮಕ-ಯಾದಗಿರಿ ಡಿಸಿ ಸುಶೀಲಾ

Published 24 ನವೆಂಬರ್ 2023, 15:37 IST
Last Updated 24 ನವೆಂಬರ್ 2023, 15:37 IST
ಅಕ್ಷರ ಗಾತ್ರ

ಯಾದಗಿರಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿವಿಧ ಚಟುವಟಿಕೆಗಳ ಪರಿಣಾಮಕಾರಿ ನಿರ್ವಹಣೆ ಮತ್ತು ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸುಶೀಲಾ ಬಿ. ತಿಳಿಸಿದ್ದಾರೆ.

ಪಿಂಚಣಿ ಇಲಾಖೆಯ ಸಹಾಯಕ ನಿರ್ದೇಶಕ ವೀರೇಂದ್ರ ಹುಲಿನಾಯಕ್ ಅವರನ್ನು ಮಾನವಶಕ್ತಿ ನಿರ್ವಹಣೆ, ಡಿಟಿಐ ಪ್ರಾಂಶುಪಾಲ ಉದಯ ಕುಮಾರ್ ಅವರನ್ನು ತರಬೇತಿ ನಿರ್ವಹಣೆ, ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಉಮಾಶ್ರೀ ಅವರನ್ನು ವಸ್ತು ನಿರ್ವಹಣೆ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಿಲಿಂದ್ ಕುಮಾರ್ ಎಸ್.ಎಸ್. ಅವರನ್ನು ಸಾರಿಗೆ ನಿರ್ವಹಣೆ, ಡಿಐಒ, ಎನ್‌ಐಸಿ ಅಧಿಕಾರಿ ಶ್ರೀನಿವಾಸ ಅವರನ್ನು ಗಣಕೀಕರಣ, ಸೈಬರ್ ಭದ್ರತೆ ಮತ್ತು ಐಟಿ, ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪಂವಾರ್‌ ಅವರನ್ನು ಸ್ವೀಪ್ ಹಾಗೂ ಎಂಸಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರನ್ನು ಕಾನೂನು ಮತ್ತು ಸುವ್ಯವಸ್ಥೆ ಮತ್ತು ಭದ್ರತಾ ಯೋಜನೆ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಧಿಕಾರಿ ಅವರನ್ನು ಇವಿಎಂ ನಿರ್ವಹಣೆ, ಭೀಮರಾಯನಗುಡಿಯ ಕೆಬಿಜೆಎನ್‌ಎಲ್ ಕಾಲುವೆ ಮುಖ್ಯ ಲೆಕ್ಕಾಧಿಕಾರಿ ಮಹೇಶ್ ಮಾಲಗತ್ತಿ ಅವರನ್ನು ವೆಚ್ಚದ ಮೇಲ್ವಿಚಾರಣೆ, ಹೆಚ್ಚುವರಿ ಜಿಲ್ಲಾಧಿಕಾರಿ ಕಾರ್ಯಾಲಯದ ಅಮರೇಶ ಬಿರಾದಾರ್ ಅವರನ್ನು ಪೋಸ್ಟಲ್‌ ಬ್ಯಾಲೆಟ್ ಹಾಗೂ ಇಟಿಪಿಬಿಎಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ಡಿ.ನದಾಫ್ ಅವರನ್ನು ಮಾಧ್ಯಮ, ಭೂ ದಾಖಲೆ ಇಲಾಖೆಯ ಉಪ ನಿರ್ದೇಶಕ ವರುಣ್ ಅವರನ್ನು ಸಂವಹನ ಯೋಜನೆ, ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್ ಅವರನ್ನು ಮತದಾರರ ಪಟ್ಟಿಗಳು, ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಅಜಿತ್ ಜಿ.ನಾಯ್ಕ್ ಅವರನ್ನು ದೂರುಗಳ ಪರಿಹಾರ ಮತ್ತು ಮತದಾರರ ಸಹಾಯವಾಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ವೀರಣ್ಣಗೌಡ, ಜಿಲ್ಲಾ ಪಂಚಾಯಿತಿ ಪಿಡಿ ಡಿಆರ್‌ಡಿ ಎ ಬಲವಂತ ರಾಥೋಡ್ ಅವರನ್ನು ವೀಕ್ಷಕ ನೋಡಲ್ ಅಧಿಕಾರಿಗಳ ಹೊಣೆ ವಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT