ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದಾಪುರ | ಭಗೀರಥ ಭಾರತ ಯಾತ್ರೆ: ಭಾಗವಹಿಸಲು ಮನವಿ

Published 7 ಡಿಸೆಂಬರ್ 2023, 15:36 IST
Last Updated 7 ಡಿಸೆಂಬರ್ 2023, 15:36 IST
ಅಕ್ಷರ ಗಾತ್ರ

ಸೈದಾಪುರ: ಭಾರತ ದೇಶದಾದ್ಯಂತ ಭಗೀರಥ ಜನ ಕಲ್ಯಾಣ ಯಾತ್ರೆ ಹಮ್ಮಿಕೊಳ್ಳಲಾಗಿದ್ದು, ದೇಶದ 10 ರಾಜ್ಯಗಳಲ್ಲಿ ಪ್ರವಾಸ ಮುಗಿಸಿ ಡಿ.10ರಂದು ಮಧ್ಯಾಹ್ನ 2 ಗಂಟೆಗೆ ಯಾದಗಿರಿ ನಗರಕ್ಕೆ ಆಗಮಿಸುತ್ತಿದೆ. ನಗರದ ವಾಲ್ಮೀಕಿ ಭವನದಲ್ಲಿ ವೇದಿಕೆ ಕಾರ್ಯಕ್ರಮ ಜಗುಗಲಿದೆ ಎಂದು ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಬನ್ನಪ್ಪ ಹುಲಿಬೆಟ್ಟ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಲಯ ಉಪ್ಪಾರ ಸಂಘ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಭಾರತ ದೇಶದಾದ್ಯಂತ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಸುಮಾರು 15 ಕೋಟಿಯಷ್ಟು ಇರುವ ಉಪ್ಪಾರ ಸಮಾಜವನ್ನು ಸಂಘಟಿಸಿ ಭಗೀರಥ ಸಮಾಜವೆಂಬ ಒಂದೇ ಹೆಸರಿನಿಂದ ಕರೆಯಲು ಹರೀಶ್ ಮಹತೋ ಚವ್ಹಾಣ್ ಹಾಗೂ ದೇಶದ ವಿವಿಧ ರಾಜ್ಯಗಳ ಹನ್ನೊಂದು ಜನರ ತಂಡದೊಂದಿಗೆ ಕರ್ನಾಟಕ ರಾಜ್ಯ ಉಪ್ಪಾರ ಮೀಸಲಾತಿ ಯಾತ್ರೆಯು ನಡೆಯಲಿದೆ.

ಕರ್ನಾಟಕ ರಾಜ್ಯ ಉಪ್ಪಾರ ಸಂಘದ ನೇತೃತ್ವದಲ್ಲಿ ಭಗೀರಥ ಪೀಠದ ಜಗದ್ಗುರು ಪುರುಷೋತ್ತಮಾನಂದ ಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ, ಪ್ರಧಾನ ಕಾರ್ಯದರ್ಶಿ ವಕೀಲ ಯು.ವೆಂಕೋಬ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಮುಂದಿಟ್ಟುಕೊಂಡು ಯಾತ್ರೆ ಸಾಗುತ್ತಿದೆ. ಇದರಲ್ಲಿ ಸೈದಾಪುರ ವಲಯ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕು ಸಂಘಗಳ ಪದಾಧಿಕಾರಿಗಳು, ಮುಖಂಡರು, ಜನಪ್ರತಿನಿಧಿಗಳು, ನೌಕರರು, ರೈತರು, ಮಹಿಳೆಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಾತ್ರೆ ಯಶಸ್ವಿಗೊಳಿಸಬೇಕೆಂದು ಬನ್ನಪ್ಪ ಹುಲಿಬೆಟ್ಟ ಸೌರಾಷ್ಟ್ರಹಳ್ಳಿ, ವಲಯ ಅಧ್ಯಕ್ಷ ಶಾಂತಪ್ಪ ಬೆಳಗುಂದಿ, ರಮೇಶ ಕಣೇಕಲ, ನಿಂಗಪ್ಪ, ರಾಚಪ್ಪ ಬೆಳಗುಂದಿ ಇತರರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT