ಯಾದಗಿರಿ: ಕಡಿಮೆ ತೂಕದಿಂದ ಜನಿಸಿದ ತ್ರಿವಳಿ ನವಜಾತ ಹೆಣ್ಣು ಶಿಶುಗಳನ್ನು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವಿಶೇಷ ನವಜಾತ ಚಿಕಿತ್ಸಾ ಘಟಕ (ಎಸ್‌ಎನ್‌ಸಿಯು) ವಿಭಾಗದಲ್ಲಿ ಕಾಂಗರೂ ತಾಯಿ ಆರೈಕೆ (ಕೆಎಂಸಿ) ನೀಡುತ್ತಿದ್ದು ತೂಕದಲ್ಲಿ ಹೆಚ್ಚಳವಾಗಿದೆ.

ಜಿಲ್ಲೆಯ ವಡಗೇರಾ ತಾಲ್ಲೂಕಿನ ಉಳ್ಳೆಸೂಗುರು ಗ್ರಾಮದ ಚಂದಮ್ಮ ಚಂದಪ್ಪ ಉಳ್ಳೆಸೂಗುರು ದಂಪತಿಗೆ ಖಾಸಗಿ ಆಸ್ಪತ್ರೆಯಲ್ಲಿ ಮೂರು ಶಿಶುಗಳು ಜನಿಸಿದ್ದು ಉಸಿರಾಟದ ತೊಂದರೆ ಇತ್ತು. ಹೀಗಾಗಿ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

‘ಫೆಬ್ರುವರಿ 25ರಂದು ಹೆರಿಗೆ ದಿನಾಂಕ ನಿಗದಿಯಾಗಿತ್ತು. ಜನವರಿ 10ಕ್ಕೆ ಹೆರಿಗೆಯಾಗಿದ್ದು, ಮೂರು ಶಿಶುಗಳ ತೂಕ ಕಡಿಮೆ ಇತ್ತು. 1.580, 1.530, 1.040 ಗ್ರಾಂ ಶಿಶುಗಳು ಜನಿಸಿದ್ದವು. ಉಸಿರಾಟ ತೊಂದರೆಯಾಗಿತ್ತು. ಈಗ ಕಾಂಗರೂ ತಾಯಿ ಆರೈಕೆಯಿಂದ ಮಕ್ಕಳ ತೂಕದಲ್ಲಿ ಹೆಚ್ಚಳವಾಗಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ’ ಎಂದು ಡಾ.ಸಚಿನ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.